ಬಸವಾದಿ ಶರಣರ ಚಿಂತನೆಗಳನ್ನು ಆಧರಿಸಿ ಬರೆದ ಲೇಖನಗಳು ಇವು. ವಚನಗಳಲ್ಲಿ ಸಮತಾವಾದ, ವಚನ ಸಾಹಿತ್ಯದ ಶೋಧ ಮತ್ತು ಸವಾಲುಗಳು, ಶರಣರು ಮತ್ತು ಸಂಗೀತ, ಪರ್ಯಾಯ ಸಮಾಜದ ನೆಲೆಯಾಗಿ ಅನುಭವ ಮಂಟಪ, ವಚನಕಾರರು ಪ್ರತಿಪಾದಿಸಿದ ವೃತ್ತಿ ಮೌಲ್ಯಗಳು, ವಚನಕಾರರು ಉಲ್ಲೇಖಿಸಿದ ನೇಮಗಳು, ವಚನಕಾರರ ದೃಷ್ಟಿಯಲ್ಲಿ ಗಂಡು-ಹೆಣ್ಣಿನ ಬಾಂಧವ್ಯ, ವಚನ ಸಾಹಿತ್ಯದಲ್ಲಿ ಜೀವ ಜಗತ್ತಿನ ಪರಿಕಲ್ಪನೆ, ವಚನಕಾರರು ಖಂಡಿಸಿದ ಮೂಢನಂಬಿಕೆಗಳು ಎಂಬ ಒಂಬತ್ತು ಲೇಖನಗಳು ಇಲ್ಲಿವೆ.
ಶಿವಶರಣರ ಸಂಘಟನಾಶಕ್ತಿ, ವಿಶ್ವಭ್ರಾತೃತ್ವ ಪ್ರಜ್ಞೆ, ಸಮಾಜಮುಖಿ ಚಿಂತನೆ, ಸ್ವಯಂಪರಿಪೂರ್ಣ ಸಮಾಜದ ಪರಿಕಲ್ಪನೆ ಅಮೋಘವಾದುದು. ಆ ನಿಟ್ಟಿನಲ್ಲಿ ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಆಗಮಿಸಿದವರ ಜೀವನ ವೃತ್ತಾಂತಗಳು, ಚಿಂತನೆಗಳು ವೈವಿಧ್ಯಮಯವಾಗಿದ್ದರೂ ಸಮಷ್ಠಿ ಹಿತಚಿಂತನೆ ಅವರೆಲ್ಲರ ಜೀವನೋದ್ದೇಶವಾಗಿತ್ತು. ಅದನ್ನು ಸಾಧಿಸಲು ತಮ್ಮೆಲ್ಲ ಶ್ರಮವನ್ನು ಸಮಾಜಕ್ಕೆ ವಿನಿಯೋಗಿಸುವುದರ ಮುಖಾಂತರ ಶ್ರಮಜೀವಿಗಳಿಗೆ ಆ ಕಾಲದ ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ನ್ಯಾಯ ಒದಗಿಸಿದರು. ವರ್ಣ-ವರ್ಗ-ಲಿಂಗಭೇದಗಳನ್ನು ಅಲ್ಲಗಳೆದು ಪರ್ಯಾಯ ಸಮಾಜವನ್ನು ರೂಪಿಸಿದ ಪರಿ ಇತ್ಯಾದಿ ಮಹತ್ವದ ಸಂಗತಿಗಳನ್ನು ಕೃತಿ ಚರ್ಚಿಸುತ್ತದೆ.
©2024 Book Brahma Private Limited.