ಖ್ಯಾತ ಲೇಖk ಡಾ. ಕೆ.ಎಸ್. ನಾರಾಯಣಾಚಾರ್ಯ ಅವರ ಕೃತಿ-ಅಗ್ನಿಹೋತ್ರ ತತ್ವ. ಅಗ್ನಿಹೋತ್ರದ ಅಗ್ನಿತ್ರಯಕ್ಕೆ ಯಜ್ಞೇಶ, ನಾರಾಯಣ, ಅಗ್ನಿವರ್ಣ ಇತ್ಯಾದಿ ನಾಮಕರಣದ ಭಾಗದ 9ನೇ ಸ್ಕಂದದ ಸೂತ್ರವೂ (9-17-47-48) ನನಗೆ ಉಪಯುಕ್ತವಾಗಿ ಕೀಲಿಕೈ ಆದವು. ಭಗವಂತನ ಆದಿ ಉಪಾಸನಾ ಮಾರ್ಗವೇ ಅಹಗ್ನಿ ಉಪಾಸನೆ ಎಂದ ಬಳಿಕ, ಎಲ್ಲ ಸಮಂಜಸವಾಗಿ ಕಾಣುತ್ತಾ, ಈ ಪ್ರತಿಪಾದನೆಯನ್ನು ಕಥೆಯೊಳಗೆ ಸೇರಿಸಲು ಭಾವವೂ, ಮೂಲಕ್ಕೆ ಬೇರೆ ರೂಪಾಂತರವೂ ಆಗಬಹುದಾದ ಸಂಭವದಲ್ಲಿ ತಾವು ಈ ಅಗ್ನಿಹೋತ್ರ ತತ್ವ ಎಂಬ ಕಿರುಹೊತ್ತಗೆಯನ್ನು ಬರೆಯಬೇಕಾಯಿತು ಎಂದು ಲೇಖಕರು ಹೇಳಿಕೊಂಡಿದ್ದಾರೆ.
ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...
READ MORE