`ಅಷ್ಡದಶಾ ಪೀಠಗಳು ಹಾಗೂ ಪ್ರಸಿದ್ಧ ದೇವಿ ಕ್ಷೇತ್ರಗಳು' ಲಲಿತಾ ಶೇಷಾದ್ರಿ ಅವರ ಕೃತಿಗಳಾಗಿವೆ. ಕೇರಳ ರಾಜ್ಯದ ಪೂರ್ಣಾನದಿ ತೀರದಲ್ಲಿ ಇರುವ ಅತಿ ಶ್ರೇಷ್ಠವಾದ ಕ್ಷೇತ್ರ ಕಾಲಟಿಯಲ್ಲಿ ಶ್ರೀ ಶಂಕರ ಭಗವತ್ಪಾದಾಚಾರ್ಯರು ಜನಿಸಿ ಆ ಕ್ಷೇತ್ರವನ್ನು ಪವಿತ್ರಗೊಳಿಸಿದರು. ತಮ್ಮ ಎಂಟನೇ ವಯಸ್ಸಿನಲ್ಲಿ ತಾಯಿಯ ಸಮ್ಮತವನ್ನು ಪಡೆದು ಸಂನ್ಯಾಸಾಶ್ರಮವನ್ನು ಸ್ವೀಕರಿಸಿದರು. ಆದರೆ ತಮ್ಮ ಜನ್ಮದಾತೆಯ ಅಂತಿಮ ಸಂಸ್ಕಾರಗಳನ್ನು ಮಾಡಲು ಅವರಿಗೆ ಗ್ರಾಮನಿವಾಸಿಗಳು ಸಹಕರಿಸಲಿಲ್ಲ. ಈ ಕಾರಣದಿಂದಾಗಿ ಕಾಲಟಿಗ್ರಾಮ ಶಾಪಗ್ರಸ್ತವಾಯಿತು. ಶ್ರೀ ಶಂಕರರು ಏಕಾಂಗಿಯಾಗಿ ತಮ್ಮ ತಾಯಿಯ ಅಂತ್ಯ ಸಂಸ್ಕಾರವನ್ನು ಅವರಿಗೆ ಸದ್ಧತಿಯನ್ನು ಅನುಗ್ರಹಿಸಿದರು. ಸುರೇಶ್ವರಾಚಾರ್ಯರಿಂದ ಅವಿಚ್ಛಿನ್ನ ಪರಂಪರೆಯನ್ನು ಹೊಂದಿದ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದ ಆಚಾರ್ಯರುಗಳು ತಪಸ್ವಿಗಳಾಗಿಯೂ, ಯೋಗಿಗಳಾಗಿಯೂ ಇದ್ದಾರೆ. ಈ ಪೀಠದ ಮೂವತ್ತೆರಡನೆ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳು ತಪಶಕ್ತಿಯನ್ನೂ, ಜ್ಞಾನವನ್ನೂ ಪಡೆದವರಾಗಿದ್ದರು. ಭಗವತ್ಪ್ರೇರಣೆಯಿಂದ ಇವರು ಕಣ್ಣಿಗೆ ಮರೆಯಾಗಿದ್ದ ಶ್ರೀ ಶಂಕರ ಜನ್ಮಭೂಮಿಯಾದ ಕಾಲಟಿಯನ್ನು ಕಂಡು ಹಿಡಿಯಲು ನಿರ್ಧರಿಸಿದರು ಹೀಗೆ ಅನೇಕ ವಿಚಾರಗಳನ್ನು ಈ ಕೃತಿ ಒಳಗೊಂಡಿದೆ.
©2024 Book Brahma Private Limited.