ಲೇಖಕ ಕೆ. ಚಂದ್ರಮೌಳಿ ಅವರ ಕೃತಿ-ಪವಿತ್ರ ಕಾಶಿ. ಹಿಂದೂ ಧರ್ಮದ ಜನಮನದಲ್ಲಿ ಕಾಶಿ ಪಟ್ಟಣಕ್ಕೆ ಪವಿತ್ರ ಭಾವನೆ ಇದೆ. ಸನಾತನ ಧರ್ಮ ಗ್ರಂಥ ಹಾಗೂ ಪುರಾಣಗಳಲ್ಲೂ ಕಾಶಿ ಕ್ಷೇತ್ರವನ್ನು ಉಲ್ಲೇಖಿಸಲಾಗಿದೆ. ಕಾಶಿ ಪಟ್ಟಣಕ್ಕೆ ಬಂದರೆ ಮಾಡಿದ ಪಾಪಗಳೆಲ್ಲವೂ ಪರಿಹಾರ ಕಾಣುವವು ಎಂಬ ನಂಬಿಕೆ ಇದೆ. ಹೀಗಾಗಿ, ಭಾರತೀಯ ಜನಮನದಲ್ಲಿ ಪೂಜ್ಯ ಸ್ಥಾನದಲ್ಲಿರುವ ಕಾಶಿಯ ಕುರಿತು ಅದರ ಪೌರಾಣಿಕ ಹಿನ್ನೆಲೆಯನ್ನು ಕೇಂದ್ರೀಕರಿಸಿ ಹಾಗೂ ಅಲ್ಲಿಯ ತಾಣಗಳ ಮಹತ್ವ ಕುರಿತು ವಿವರಿಸಿದ ಕೃತಿ ಇದು.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಕೆ. ಚಂದ್ರಮೌಳಿಯವರು ಪ್ರವೃತ್ತಿಯಲ್ಲಿ ಬರಹಗಾರ. ಹರಟೆ, ಹಾಸ್ಯಪ್ರಬಂಧಗಳಿಂದ ಹಿಡಿದು ಪ್ರವಾಸ ಕಥನ, ನಾಟಕ, ಕಾದಂಬರಿ ಮತ್ತು ಸಾಂಸ್ಕೃತಿಕ ಅಧ್ಯಯನಗಳವರೆಗೂ ಇವರ ಸಾಹಿತ್ಯ ವ್ಯಾಪ್ತಿ ಹರಡಿದೆ. ಮರಾಠಿ ಮತ್ತು ಹಿಂದಿ ಭಾಷೆಗಳಿಗೂ ಇವರ ಪ್ರವಾಸ ಕಥನಗಳು ಅನುವಾದವಾಗಿವೆ. ಹರಟೆಗಳಲ್ಲಿ 'ಹೆಂಡತಿಯ ಗುಲಾಮ', ಕಥೆಗಳಲ್ಲಿ 'ಐರಾವತದ ಕಥೆಗಳು', ನಾಟಕಗಳಲ್ಲಿ 'ಪಾರ್ಟಿ', ಸಾಂಸ್ಕೃತಿಕ ಅಧ್ಯಯನಗಳಲ್ಲಿ 'ಬೆಂಗಳೂರಿನ ನೋಟಗಳು' ಮತ್ತು 'ಲ್ಯೂಮಿನಸ್ ಕಾಶಿ ಟು ವೈಬ್ರಟ್ ವಾರಾಣಸಿ' ಪ್ರಮುಖವಾದವು. ಚಂದ್ರಮೌಳಿಯವರದು ಎದುರಿಗೆ ಕೂತು ಮಾತ ನಾಡುವಂತಹ ಆಪ್ತಶೈಲಿ; ಒಮ್ಮೆ ಅರಳಿದ ಮಂದಹಾಸ ಕೊನೆಯವರೆಗೂ ಉಳಿಯುವಂತಹ ಸುರಸ ಹಾಸ್ಯ; ಅಪಾರ ವಿಷಯ ...
READ MORE