ಸಂಧ್ಯಾವಂದನಮ್ ಶಿವಾದಿಪಂಚಾಯತನಪೂಜಾ (ಋಗ್ವೇದೀಯಾ) ಈ ಪುಸ್ತಕವು ಲೇಖಕ ಕೆ.ಜಿ. ಣೇಶ ಭಟ್ ಅವರ ರಚಿಸಿದ್ದಾರೆ. ಸಂಧ್ಯಾವಂದನೆ, ಅಗ್ನಿಕಾರ್ಯ, ಭೋಜನವಿಧಿ (ಸಂಕ್ಷಿಪ್ತ ವಿವರಣೆಯೊಂದಿಗೆ) ಮತ್ತು ಶಿವಾದಿಪಂಚಾಯತನ ಪೂಜೆಗಳ ಸಂಕ್ಷಿಪ್ತ ಪ್ರಯೋಗವಿಧಿಯನ್ನು ಒಳಗೊಂಡಿದೆ. ಧಾವಂತ ಒತ್ತಡಗಳಿಂದ ಕೂಡಿರುವ ಇಂದಿನ ಜೀವನಶೈಲಿಯನ್ನು ದೃಷ್ಟಿಯಲ್ಲಿರಿಸಿಕೊಂಡು, ವಿಧಿಗಳನ್ನು ಯಾವುದೇ ಕರ್ಮಲೋಪಕ್ಕೆ ಆಸ್ಪದವಿಲ್ಲದಂತೆ ಚುಟುಕಾಗಿಯೂ ಸರಳವಾಗಿಯೂ ಕೊಡಲಾಗಿದೆ. ಜೊತೆಗೆ, ಶುಭ ಸಮಾರಂಭ ಮತ್ತು ಶುಭ ಸಂದರ್ಭಗಳಲ್ಲಿ , ಆಹ್ವಾನಿತ ಬಂಧು-ವರ್ಗದವರಿಗೆ ವಿಶೇಷವಾದ ನೆನಪಿನ ಕಾಣಿಕೆಯಾಗಿ ನೀಡಲು ಸೂಕ್ತವಾಗಿದೆ ಎಂದು ಲೇಖಕರು ಹೇಳಿದ್ದಾರೆ.
ಶ್ರೀ ಕೆ. ಜಿ. ಗಣೇಶ ಭಟ್ಟರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕುಡಿನಲ್ಲಿ ಗ್ರಾಮದವರು. ಕಳೆದ ಮೂರುದಶಕಗಳಿಂದ ಶೃಂಗೇರಿಯಲ್ಲಿ ವಾಸಿಸುತ್ತಿದ್ದಾರೆ. ಶೃಂಗೇರಿಯ ಶ್ರೀಮಠೀಯ ಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಮಹಾಪಾಠಶಾಲೆಯ ಪ್ರಾಕ್ತನ ವಿದ್ಯಾರ್ಥಿಯಾಗಿದ್ದು, ವೇದ, ಆಗಮ ಮತ್ತು ಸಾಹಿತ್ಯವನ್ನು ಅಭ್ಯಸಿಸಿದ್ದಾರೆ. ಪೌರೋಹಿತ್ಯ ವೃತ್ತಿಯಲ್ಲಿ ಎರಡು ದಶಕಗಳಿಗೂ ಮಿಗಿಲಾದ ಅನುಭವದ ಜೊತೆಗೆ, ನಾಲ್ಕು ಧಾರ್ಮಿಕ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಕೃತಿಗಳು: ನಿತ್ಯಕರ್ಮ ಪ್ರಕಾಶಿಕಾ (ಋಗ್ವೇದೀಯಾ), ಪರ್ಜನ್ಯ ಕಲ್ಪಃ, ಪ್ರಯೋಗ ಪ್ರಕಾಶಿಕಾ (ಋಗ್ವೇದೀಯಾ), ಸಂಧ್ಯಾವಂದನಮ್ ಶಿವಾದಿಪಂಚಾಯತನಪೂಜಾ (ಋಗ್ವೇದೀಯಾ) ...
READ MORE