ವೇದ ಸಂವತ್ಸರ -ವಿದ್ವಾಂಸ ತಿ.ನಾ. ರಾಘವೇಂದ್ರ ಅವರ ಕೃತಿ. ಇದು ಎರಡನೇ ಮುದ್ರಣ. ನಾಲ್ಕು ವೇದಗಳಿಂದ ಆಯ್ದ ಶ್ರೇಷ್ಠ ಮಂತ್ರಗಳು ಹಾಗೂ ಅವುಗಳ ಅರ್ಥಗಳನ್ನು ವಿವರಿಸಿದ ಕೃತಿ. ಸನಾತನ ಪರಂಪರೆಯನ್ನು ಉಸಿರಾಡುವ ಭಾರತ ದೇಶವು ವೇದ-ಉಪನಿಷತ್ತುಗಳನ್ನು ಗೌರವಿಸುತ್ತದೆ. ಈ ಕೃತಿಯಲ್ಲಿ ಋಗ್ವೇದ, ಅಥರ್ವಣ ವೇದ, ಯಜುರ್ವೇದ ಹಾಗೂ ಸಾಮವೇದ -ಈ ಎಲ್ಲ ವೇದಗಳಲ್ಲಿಯ ಶ್ರೇಷ್ಠ ಮಂತ್ರಗಳನ್ನು ಲೇಖಕರು ಆಯ್ಕೆ ಮಾಡಿಕೊಂಡಿದ್ದು, ಅವುಗಳಿಗೆ ತಮ್ಮದೇ ಆದ ರೀತಿಯಲ್ಲಿ ಅರ್ಥ ವಿವರಣೆ ನೀಡಿದ್ದಾರೆ. ಹೋಮದ ಸ್ವರೂಪ, ಅಗತ್ಯತೆ ಕುರಿತ ಪ್ರತಿಪಾದನೆಯೂ ಇದೆ.
©2024 Book Brahma Private Limited.