ನಾಡ ಗುಡಿಗಳು

Author : ಬಿ.ಎಸ್. ಪಾರಿಜಾತ ಮೋಹನ್

Pages 164

₹ 120.00




Year of Publication: 2017
Published by: ನಾಗಾರ್ಜುನ ಸಾಹಿತ್ಯ ಪ್ರಕಾಶನ
Address: #13, 1ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಕೆ.ಎಸ್.ಆರ್. ಡಿ.ಸಿ. ಬಡಾವಣೆ, ವಿಶ್ವನೀಡಂ ಅಂಚೆ, ಮಹದೇಶ್ವರ ನಗರ, ಬೆಂಗಳೂರು-560091
Phone: 9008335689

Synopsys

ಲೇಖಕಿ ಬಿ.ಎಸ್. ಪಾರಿಜಾತ ಮೋಹನ್ ಅವರು ಬರೆದ ಕೃತಿ-ನಾಡ ಗುಡಿಗಳು. ಸ್ಥಳ-ಕಾಲವನ್ನು ಪ್ರತಿನಿಧಿಸುವ ನಾಡಗುಡಿಗಳು ಮನುಷ್ಯನ ನಡಾವಳಿಕೆಯನ್ನು ತಮ್ಮದೇ ರೀತಿಯಲ್ಲಿ ನಿಯಂತ್ರಿಸುವ ಮೂಲಕ ಇಡೀ ಊರ ನೆಮ್ಮದಿ-ಆರೋಗ್ಯವನ್ನು ಕಾಯ್ದುಕೊಂಡು ಬರುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಅಂಶವೇ ಕೃತಿಯ ಜೀವಾಳ. ದೇವಸ್ಥಾನಗಳು ಎಂದರೆ ಪೂಜೆ=ಅರ್ಚನೆ ಮಾತ್ರ ವಿಶೇಷವಲ್ಲ; ಭಕ್ತನ ಆತ್ಮದಲ್ಲಿ ಪರಮಾತ್ಮನ ಇರುವಿಕೆಯನ್ನು ತೋರುವ ಸ್ಥಳಗಳು. ಪುರಾಣ ವಿಶೇಷತೆಗಳ ವಿವರಣೆಗೆ ಇರುವ ಸ್ಥಾವರ ರೂಪಗಳು. ಅಲೌಕಿಕ ಶಕ್ತಿಯನ್ನು ಮನದಟ್ಟು ಮಾಡಿಸಿ ಎಚ್ಚರಿಸುವ ತಾಣಗಳು.

ಕರ್ನಾಟಕದ ವಿಶೇಷ ಧಾರ್ಮಿಕ-ಪೌರಾಣಿಕ-ಐತಿಹಾಸಿಕ ತಾಣಗಳ ಕುರಿತು ಯಾತ್ರಿಕರಿಗೆ ಮಾಹಿತಿ ನೀಡುವ ಕೃತಿ ಇದು. ಚರಿತ್ರೆಯ ಕಾಲಗತಿಯಲ್ಲಿ ದೇಗುಲಗಳು ಕಂಡ ಏಳು-ಬೀಳುಗಳ ವಿವರಣೆಯೂ ಇದೆ. ನಾಡಗುಡಿಗಳು ಮಾತೃದೇವತೆಗಳನ್ನು ಪ್ರತಿನಿಧಿಸುತ್ತವೆ. ಪ್ರವಾಸದ ಸಿದ್ಧತೆ, ದೇಗುಲಗಳ ದಿನದ ದರ್ಶನ, ವೇಳಾಪಟ್ಟಿ, ಕ್ಷೇತ್ರದ ಮಾರ್ಗ, ಊಟ-ವಸತಿ ಸೌಲಭ್ಯ ಹೀಗೆ ಯಾತ್ರಿಕರಿಗೆ ಉಪಯುಕ್ತವಾದ ಸಾಧ್ಯವಿದ್ದ ಎಲ್ಲ ಮಾಹಿತಿ ಒಳಗೊಂಡಿದೆ. ಕರ್ನಾಟಕದಾದ್ಯಂತ ಪ್ರವಾಸ ಕೈಕೊಂಡ ಲೇಖಕಿ ಬಿ.ಎಸ್. ಪಾರಿಜಾತ ಮೋಹನ್ ಅವರು ವಿವಿಧ ಕ್ಷೇತ್ರದ ಮಾಹಿತಿಯನ್ನು ಚಂದವಾಗಿ ಪೋಣಿಸಿದ ಲೇಖನ ಮಾಲೆಯೇ ಈ ಕೃತಿ.

 

About the Author

ಬಿ.ಎಸ್. ಪಾರಿಜಾತ ಮೋಹನ್
(26 January 1971)

ಬೆಂಗಳೂರು ನಿವಾಸಿ ಬಿ.ಎಸ್. ಪಾರಿಜಾತ ಮೋಹನ ಅವರು (ಜನನ: 26-01-1971) ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರದಲ್ಲಿ ಎಂ.ಎ ಪದವೀಧರೆ. ತತ್ವಶಾಸ್ತ್ರ ಮತ್ತು ಜಾನಪದ ಸಾಹಿತ್ಯದಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದ ವಿದ್ಯಾರ್ಥಿನಿಯೂ ಆಗಿದ್ದಾರೆ. ರೇಖಾಚಿತ್ರ ರಚನೆ, ಸಂಗೀತ, ನಾಟಕ, ಕಾರ್ಯಕ್ರಮ ನಿರೂಪಣೆಯಲ್ಲಿ ಆಸಕ್ತಿ. ವಿಜಯ ಕರ್ನಾಟಕ ದಿನಪತ್ರಿಕೆಯ ಲೈಫ್ ಸ್ಟೈಲ್, ವೆರೈಟಿ, ಫುಡ್ ಕೋರ್ಟ್, ಗಾರ್ಡನ್ ಟಿಪ್ಸ್ ವಿಭಾಗಗಳ ಅಂಕಣಗಾರ್ತಿ.  ಇವರ ಲೇಖನ-ಕತೆ-ಕವಿತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು. ನಾಡಗುಡಿಗಳು ಹಾಗೂ ದೇಗುಲ ದರ್ಶನ-ಇವು ಪಾರಿಜಾತ ಅವರ ಕೃತಿಗಳು. ಪ್ರಶಸ್ತಿಗಳು: ನಾಡಪ್ರಭು ...

READ MORE

Related Books