ಲೇಖಕಿ ಲಲಿತಾಂಬಾ ಚಂದ್ರಶೇಖರ್ ಅವರ ಸನಾತನ ಸಂಪ್ರದಾಯಗಳು ಸಂದೇಹ – ಸಮಾಧಾನ ಭಾಗ-3 ಕೃತಿಯು ಸನಾತನ ಧರ್ಮ, ಸಂಪ್ರದಾಯಗಳ ಬಗೆಗೆ ಮಾಹಿತಿ ನೀಡುವಂತಹ ಕೃತಿಯಾಗಿದೆ. ಸಂಗೀತ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಇವರನ್ನು ಈ ಕ್ಷೇತ್ರಗಳು ಗುರುತಿಸಿ ಅನೇಕ ಪ್ರಶಸ್ತಿಗಳನ್ನು ನೀಡಿವೆ. ಇವರ ಎರಡು ಕಾದಂಬರಿಗಳು ಚಲನಚಿತ್ರವಾಗಿದೆ. ಕೆಲವು ಪ್ರಶಸ್ತಿ ವಿಜೇತವಾಗಿವೆ. ಆಕಾಶವಾಣಿಯಲ್ಲಿ ಹಾಗೂ ದೂರದರ್ಶನಗಳಲ್ಲಿ ಇವರು ಅನೇಕ ಸಾಹಿತ್ಯ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರು ಬಹುಭಾಷಾ ವಿಶಾರದರು.
ಕತೆಗಾರ್ತಿ, ಲೇಖಕಿ ಲಲಿತಾಂಬಾ ಚಂದ್ರಶೇಖರ್ ಅವರು ಅನುವಾದಕಿ. ಇಂಗ್ಲಿಷ್ ಹಾಗೂ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಎಂ.ಇಡಿ., ಪಿ.ಜಿ.ಡಿ.ಟಿ.ಇ. ಪದವೀಧರೆ. ಹೈದ್ರಾಬಾದ್ ಶಿಕ್ಷಣ ವಿಶ್ವವಿದ್ಯಾಲಯದ ಪ್ರಾಂಶುಪಾಲರಾಗಿ ನಿವೃತ್ತರು. 15-02-1929 ರಂದು ಜನಿಸಿದ್ದು, ಮೂಲತಃ ದಾವಣಗೆರೆಯವರು. ತಂದೆ ಬಿ. ಎಸ್. ವೆಂಕಟಕೃಷ್ಣಯ್ಯ, , ತಾಯಿ ಎಸ್. ಪಾರ್ವತಮ್ಮ. ‘ಪರ್ಲ್ ಎಸ್, ಬಕ್’ ಅವರ ಸಣ್ಣಕತೆಗಳನ್ನು ಕನ್ನಡಕ್ಕೆ 1952ರಲ್ಲಿ ಭಾಷಾಂತರಿಸಿದ್ದಾರೆ. `ಮುಕುಂದ ಚಂದ, ಪುನರ್ದತಾ, ರೇಖಾ ಭಾಗ-1, ಭಾಗ-2, ಸರಸ್ವತಿ ಸಂಹಾರವೇ?, ಸ್ವೀಕಾರ , ಸುಕನೈಯರು' ಕೃತಿಗಳನ್ನು ಹೊರತಂದರು. ಅವರ ‘ವಿಮೋಚನೆ’ ನೀಳ್ಗತೆ 1954ರಲ್ಲಿ, ‘ಬಿಡಿ ಹೂಗಳು’ 1966ರಲ್ಲಿ, ‘ನಾದದ ಹಾದಿಯಲ್ಲಿ’ ಎಂಬ ಅವರ ಕಥಾ ಸಂಕಲನಗಳು ಪ್ರಕಟವಾಗಿವೆ. ಅವರ ಸಾಹಿತ್ಯ ಮತ್ತು ...
READ MORE