ಭಾರತೀಯ ಮಹಾಕಾವ್ಯಗಳೆನಿಸಿದ ರಾಮಾಯಣ, ಮಹಾಭಾರತ (ಮಹಾಕಾವ್ಯಗಳು) ಭಾರತೀಯ ಸಂಸ್ಕೃತಿಯನ್ನು ಎಲ್ಲ ಕಾಲಕ್ಕೂ ತಿಳಿಸಿಕೊಡುವ ಅಮೂಲ್ಯ ಗ್ರಂಥಗಳಾಗಿವೆ. 'ಮಹಾಭಾರತ' ಮಹಾಕಾವ್ಯದಲ್ಲಿ ಬರುವ 'ಭಗವದ್ಗೀತೆ'ಯು ಸಾರ್ವಕಾಲಿಕ ಸತ್ಯವನ್ನು ತೆರೆದಿರುವ ಮಹತ್ತರವಾದ ಬೋಧನಾ ಗ್ರಂಥವಾಗಿದೆ. ಇದು ಕೇವಲ ಅರ್ಜುನನನ್ನು ಯುದ್ಧ ಮಾಡಲು ಪ್ರೇರೇಪಿಸುವ ಕೃಷ್ಣಪರಮಾತ್ಮನ ಬೋಧನೆಯಲ್ಲ. ಅಂದು, ಇಂದು ಮತ್ತು ಮುಂದಕ್ಕೂ ಸಕಲರಿಗೂ ಅನ್ವಯಿಸುವಂತಹ ನೀತಿಯು, ವೇದಗಳ ಸಾರತಮವಾದ ಸರಳವಾದ ಉಪನಿಷತ್ತುಗಳ ಸಾರವೇ ಇದಾಗಿದೆ.
ಪ್ರಮೀಳಮ್ಮ ಮೂಲತಃ ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲದವರು. ತಂದೆ ಸಿದ್ದರಾಮಯ್ಯ, ತಾಯಿ ಗುರುಸಿದ್ದಮ. ಬೆಂಗಳೂರಿನ ಜಗದ್ಗುರು ಶ್ರೀ ಶಿವರಾಮೇಶ್ವರ ಫ್ರೌಡಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ಸರ್ವಜ್ಞ ವಚನಾಮೃತ, ದೊಡ್ಡಯ್ಯ ಹೇಳಿದ ಕಥೆಗಳು, ಕನ್ನಡ ಕವಿಲೋಕ ನಚಿಕೇತ, ಜೀಮೂತವಾಹನ, ಚಾವಡಿಯ ಕಥೆಗಳು, ಸುಭಾಷಿತಗಳ ಸಂಗ್ರಹ , ಮಕ್ಕಳಿಗಾಗಿ ನೀತಿಕಥೆ, ದಿನಕ್ಕೊಂದು ಗಾದೆ, ಗಾದೆಗೊಂದು ನೀತಿಕತೆ, ರಾಮಾಯಣ, ಮಹಾಭಾರತ ಸರಳಗನ್ನಡದಲ್ಲಿ, ಭಗವದ್ಗೀತೆ. ...
READ MORE