ಮಾರ್ಟಿನ್ ಲಿಂಗ್ಸ್ ಅವರು ಇಂಗ್ಲೀಷ್ ನಲ್ಲಿ ರಚಿಸಿರುವ ಮುಹಮ್ಮದ್: ಹಿಸ್ ಲೈಫ್ ಬೇಸ್ಡ್ ಆನ್ ಅರ್ಲಿಯಸ್ಟ್ ಸೋರ್ಸ್ ಕೃತಿಯನ್ನು ಪತ್ರಕರ್ತ, ಲೇಖಕ ಸ್ವಾಲಿಹ್ ತೋಡಾರ್ ‘ಮುಹಮ್ಮದ್’ ಮೂಲ ಆಕರಗಳನ್ನು ಆಧರಿಸಿದ ಬದುಕು ಎಂಬ ಶೀರ್ಷಿಕೆಯಡಿ ಕನ್ನಡೀಕರಿಸಿದ್ದಾರೆ. ಮಾರ್ಟಿನ್ ಲಿಂಗ್ಸ್ ಇಂಗ್ಲೀಷಿನಲ್ಲಿ ಬರೆದ ಮುಹಮ್ಮದ್ ಎಂಬ ಕೃತಿಯು ಇಂಗ್ಲಿಷ್ ನಲ್ಲಿ ಬಂದ ಪ್ರವಾದಿ ಮುಹಮ್ಮದ(ಸ)ರ ಜೀವನ ಚರಿತ್ರೆಗಳಲ್ಲೇ ಉತ್ಕೃಷ್ಟವಾದುದೆಂಬ ಪರಿಗಣನೆಗೆ ಪಾತ್ರವಾಗಿದೆ. ಲಿಂಗ್ಸ್ ಸಂಪೂರ್ಣವಾಗಿ ಎಂಟನೇ ಹಾಗೂ ಒಂಭತ್ತನೇ ಶತಮಾನಗಳ ಅರೇಬಿಕ್ ಮೂಲ ಆಕರಗಳನ್ನು ಆಧರಿಸಿ, ಈ ಕೃತಿ ರಚಿಸಿದ್ದಾರೆ. ಈ ಮೂಲ ಆಕರಗಳು ಮುಹಮ್ಮದ(ಸ)ರ ಬದುಕಿಗೆ ದೃಕ್ ಸಾಕ್ಷಿಗಳಾಗಿ, ಅವರ ಜೊತೆ ನಿರಂತರ ಒಡನಾಟವಿಟ್ಟುಕೊಂಡಿದ್ದ ಅವರ ಸಂಗಾತಿಗಳ ಹೇಳಿಕೆ, ವರದಿಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಪ್ರವಾದಿ(ಸ) ಬದುಕಿನ ಹಿರಿಮೆ ಹಾಗೂ ಸರಳತೆಯನ್ನು ಲಿಂಗ್ಸ್ ಚಿತ್ರಿಸುವ ರೀತಿಯೇ ವಿಶಿಷ್ಟವಾದುದು. ಅವರು ಬಳಸುವ ಸುಂದರ ಸುಲಲಿತವಾದ ಭಾಷೆ, ಘಟನೆಗಳನ್ನು ಮರು ಸೃಷ್ಠಿಸುವಂತೆ ಪೋಣಿಸುವ ರೀತಿಯಂತೂ ಫೆಂಟಾಸ್ಟಿಕ್ ಕೃತಿಯ ಈ ಮಟ್ಟಿಗಿನ ಸ್ವಂತಿಕೆ ಹಾಗೂ ವಿಶ್ವಾಸಾರ್ಹತೆಗೆ ಬಹುಶಃ ಇದುವೇ ಕಾರಣವಾಗಿರುವಬಹುದು. ಇಂತಹ ಮೇರು ಕೃತಿ ನಿಜವಾಗುತ್ತಿರುವುದು ನಮ್ಮ ಮಟ್ಟಿಗೆ ಅವಿಸ್ಮರಣೀಯ ಘಟನೆಗಳನ್ನು ಮರುಸೃಷ್ಟಿಸುವಂತೆ ಪೋಣಿಸುವ ರೀತಿಯಂತೂ ಫೆಂಟಾಸ್ಟಿಕ್ ಕೃತಿಯ ಈ ಮಟ್ಟಿಗಿನ ಸ್ವಂತಿಕೆ ಹಾಗೂ ವಿಶ್ವಾಸಾರ್ಹತೆಗೆ ಬಹುಶಃ ಇದುವೇ ಕಾರಣವಾಗಿರಬಹುದು. ಇಂತಹ ಮೇರು ಕೃತಿ ಕನ್ನಡಕ್ಕೆ ಅನುವಾದಗೊಳ್ಳಬೇಕೆಂಬುದು ನಮ್ಮ ಬಹುಕಾಲದ ಬಯಕೆಯಾಗಿತ್ತು. ಅದು ಈಗ ನಿಜವಾಗುತ್ತಿರುವುದು ಅವಿಸ್ಮರಣೀಯ ಘಟನೆ ಎನ್ನುತ್ತಾರೆ ಪುಸ್ತಕ ಪ್ರಕಾಶಕರು.
©2024 Book Brahma Private Limited.