ಸುಬ್ರಹ್ಮಣ್ಯ ಕ್ಷೇತ್ರದ 'ಓಂಕಾರ'ದ ಭೂಪಟವನ್ನು ನನ್ನ ಆಪ್ತ ಸ್ನೇಹಿತೆ ಶ್ರೀಮತಿ ಮಾಲಿನಿಕುಮಾರ್ ಕಳುಹಿಸಿದ್ದರು. ವಿಜ್ಞಾನಿಗಳ ತಂಡವೊಂದು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ದಕ್ಷಿಣ ಭಾರತದಲ್ಲಿರುವ ಸುಬ್ರಮಣ್ಯ ಕ್ಷೇತ್ರಗಳ 'ಓಂಕಾರ'ವನ್ನು ನೋಡಿದ ಅವರು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಕಾರಣ ಅದು ನನಗೆ ದೊರಕಿತು. ಆ ಭೂಪಟದಲ್ಲಿರುವ ಕ್ಷೇತ್ರಗಳ ಬಗ್ಗೆ ಓದುವ, ಬರೆಯುವ ಹಂಬಲ ಉಂಟಾಯಿತು. ತಮಿಳುನಾಡಿನಲ್ಲಿ ಪ್ರಮುಖವಾಗಿರುವ ಈ ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಆರುಪಡೆ ವೀಡುಗಳಯೆಂದು ಕರೆಯುತ್ತಾರೆ. ಪಳನಿ, ತಿರುಚಂದೂರ್, ಸ್ವಾಮಿಮಲೈ, ತಿರುತ್ತನಿ, ತ್ರಿಪುರಕುಂಡ್ರಂ, ಪಳಮುದಿರ್ ಚೋಲೈ, ಈ ಆರು ಕ್ಷೇತ್ರದಲ್ಲಿ ಸುಬ್ರಹ್ಮಣ್ಯನು ಸ್ಕಂದನಾಗಿ, ಕಂದನಾಗಿ, ಕಾರ್ತಿಕೇಯನಾಗಿ, ಮುರುಗನಾಗಿದ್ದಾನೆ. ಈ ಆರುಕ್ಷೇತ್ರಗಳ ಜೊತೆ ಕರ್ನಾಟಕದ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ ಕೇರಳದ ಹರಿಪಾಡ್ ಕ್ಷೇತ್ರಗಳ ಬಗ್ಗೆ ಅಧ್ಯಯನ ಮಾಡಿ ಬರೆದಿದ್ದೇನೆ ಎನ್ನುತ್ತಾರೆ ಲೇಖಕರು.
©2024 Book Brahma Private Limited.