ಲೇಖಕ ರಮೇಶಬಾಬು ಯಾಳಗಿ, ದೇವಿಯ ಅಂತರಂಗ ಪ್ರವೇಶಿಸಿ ಸರಳವಾಗಿ ಜನಸಾಮಾನ್ಯರಿಗೆ ದೇವಿಯ ವಿಚಾರ ದರ್ಶನ ಮಾಡಿಸಿದ್ದಾರೆ. ವೈಚಾರಿಕ ಹಿನ್ನೆಲೆಯಲ್ಲಿ ಸಾತ್ವಿಕ ವಿಚಾರಗಳನ್ನು ಸಾದರಪಡಿಸುತ್ತಾ ದೃಶ್ಯ ಮೂರ್ತಿಗಳು ದೇವರಲ್ಲ ಅವುಗಳಲ್ಲಿರುವ ಸರ್ವಸಾಕ್ಷಿ ನಿಜ ದೇವರು ಎಂದು ಪ್ರತಿಪಾದಿಸಿದ್ದಾರೆ. ಸರ್ವವೂ ಶಕ್ತಿಯ ರೂಪ ಎಂಬ ವಿಶಾಲ ಅರ್ಥವನ್ನು ಇಲ್ಲಿ ಕಾಣಬಹುದು.
ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...
READ MORE