‘ಚಿಚ್ಛಕ್ತಿ ಪ್ರಭಾವ’ ಲೇಖಕ ನುಲೇನೂರು ಶ್ರೀಮೂರ್ತಿ ಅವರ ಕೃತಿ. ವಿಷಯವು ಏಕದೇಶೀಯವಾಗಿರದೆ ತತ್ತ್ವಶಾಸ್ತ್ರ, ವೇದಾಂತದರ್ಶನ, ಯೋಗಶಾಸ್ತ್ರ- ಮಂತ್ರಶಾಸ್ತ್ರಗಳು, ಭೌತವಿಜ್ಞಾನ, ಮನೋವಿಜ್ಞಾನ, ಸಾಕ್ಷಾತ್ಕಾರಾನುಸಂಧಾನ ಪ್ರಕ್ರಿಯೆ- ಈ ಆಯಾಮಗಳನ್ನು ಒಳಗೊಂಡಿರುವುದು. ಈ ವಿವಿಧ ಅನುಸಂಧಾನ ಸ್ತರಗಳೆಲ್ಲದರಲ್ಲೂ ಸಮಾನ ಅಂತರ್ವಾಹಿಯಾಗಿರುವ ಕಾರಣದಿಂದಲೇ ಚಿಚ್ಛಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಲೇಖಕರು ಮಂಡಿಸಿರುವುದು. ಅಂತರಂಗಸಾಧನೆಯ ಈ ವಿವಿಧ ಸ್ತರಗಳು ಪರಸ್ಪರ ಪೂರಕಗಳೆಂಬುದು ಸ್ಪಷ್ಟವೇ ಆಗಿದೆ. ಹೀಗಿರುವುದರಿಂದ ಚಿಚ್ಛಕ್ತಿ ಪ್ರಭಾವವನ್ನು ವಿವಿಧ ಭಂಗ್ಯಂತರಗಳಿಂದ ಗ್ರಹಿಸುವುದು ಬೋಧಪ್ರದ. ಚಿಚ್ಛಕ್ತಿ ಪ್ರಭಾವ ಎಂಬ ಪ್ರಧಾನ ಶೀರ್ಷಿಕೆಯೊಡಗೂಡಿ ಸಮಗ್ರ ಜೀವನ ಎಂಬ ಉಪಶೀರ್ಷಿಕೆಯನ್ನು ಈ ಕೃತಿಗೆ ನೀಡಿದ್ದಾರೆ.
ನುಲೇನೂರು ಶ್ರೀಮೂರ್ತಿ (ಶ್ರೀನಿವಾಸಮೂರ್ತಿ) ಅವರು ಚಿತ್ರದುರ್ಗ ಜಿಲ್ಲೆಯ ನುಲೇನೂರಿನ ದತ್ತಾಶ್ರಮದ (1939-89ವರೆಗೆ) ಸಾಧಕರು. 20ನೇ ಶತಮಾನದ (1906ರಲ್ಲಿ ಜನನ) .ಆರಂಭದಲ್ಲಿದ್ದವರು. ಎರಡೂವರೆ ವರ್ಷ (1926ರಿಂದ ) ಕಾಲವಷ್ಟೇ ಉದ್ಯೋಗದಲ್ಲಿದ್ದು, ನಂತರ ವಿರಕ್ತ ಜೀವನ ಕಳೆದರು. ಸ್ವಾಮಿ ರಾಮತೀರ್ಥರ ವೇದಾಂತ ಉಪನ್ಯಾಸಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದರು. ‘ಚಿಚ್ಛಕ್ತಿ ಪ್ರಭಾವ’ ಅವರ ಈ ಕೃತಿಯು ತತ್ವಶಾಸ್ತ್ರ, ವೇದಾಂತ ಶಾಸ್ತ್ರ, ಮನೋವಿಜ್ಞಾನ, ಯೋಗಶಾಸ್ತ್ರ, ಮಂತ್ರಶಾಸ್ತ್ರ ಹೀಗೆ ವಿವಿಧ ಆಯಾಮಗಳನ್ನು ಒಳಗೊಂಡಿದೆ. ಭಾರತ ಮಾತೆಯ ಸ್ವಾತಂತ್ಯ್ರ ಸಂರಕ್ಷಣೆ ಎಂಬ ಪ್ರಬಂಧವು ರಾಷ್ಟ್ರ ಚಿಂತನೆಗಳನ್ನು ಒಳಗೊಂಡಿದ್ದು, ಚಿಚ್ಛಕ್ತಿ ಪ್ರಭಾವದಲ್ಲಿ ಸೇರ್ಪಡೆಯಾಗಿದೆ. 1963ರಲ್ಲಿ ಪ್ರಕಟವಾದ ಚಿಚ್ಛಕ್ತಿ ಪ್ರಭಾವ ...
READ MORE