ಶ್ರೀಮಧುಸೂದನ ಸರಸ್ವತಿ ಮಹಾಸ್ವಾಮಿಗಳು ಸಂಸ್ಕೃತದಲ್ಲಿ ಬರೆದಿರುವ 'ಭಗವದ್ಭಕ್ತಿ ರಸಾಯನಂ' ಎಂಬ ಗ್ರಂಥವನ್ನು ಲೇಖಕ ಎಂ. ಎ. ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಕ್ತಿರಸವನ್ನು ತಾರ್ಕಿಕವಾಗಿ ನಿರೂಪಿಸುವ ಗ್ರಂಥವಿದು. ಭಕ್ತಿ ಒಂದು ರಸವೆಂದು ಸ್ಥಾಪಿಸಿ ಅದ್ವೈತ ವೇದಾಂತದೊಡನೆ ಸಮನ್ವಯ ಮಾಡಿರುವ ಒಂದು ವಿಶಿಷ್ಟ ಗ್ರಂಥವಿದು. ಈ ಗ್ರಂಥದ ವೈಶಿಷ್ಟ್ಯವಾಗಿದೆ. ಇಲ್ಲಿರುವ ವಿಚಾರಗಳು ಶಾಸ್ತ್ರೀಯವಾದ ವಿಷಯ ನಿರೂಪಣೆಯನ್ನು, ವಿಮರ್ಶೆಯನ್ನು ಮತ್ತು ಪೂರ್ವಪಕ್ಷ ಸಿದ್ಧಾಂತವನ್ನು ಸ್ಥಾಪಿಸುವ ಕ್ರಮದಲ್ಲಿ ಸಾಗುತ್ತದೆ.
ಇವರು ದಿನಾಂಕ 3-7-1948 ರಂದು ಜನಿಸಿದರು. ಈಗಿನ ವಾಸ ಶಿರಸಿಯಲ್ಲಿ. ತಂದೆ ಅಣ್ಣಪ್ಪ ಹೆಗಡೆ ಮತ್ತು ತಾಯಿ ಕಾಮಾಕ್ಷಿ. ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಜೋಗಿನ್ಮನೆಯವರಾದ ಹೆಗಡೆಯವರು ಸಂಸ್ಕೃತ ವಿದ್ವಾಂಸರು ಮತ್ತು ಗ್ರಂಥಕರ್ತರು , ಭಾಷಾಶಾಸ್ತ್ರಜ್ಞರು. ಇವರು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜು ಮತ್ತು ಪಿ.ಸಿ.ಜಾಬಿನ್ ಸೈನ್ಸ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ೧೯೭೧ರಿಂದ ೧೯೭೩ರ ವರೆಗೆ ಸೇವೆಸಲ್ಲಿಸಿದ್ದಾರೆ. ಸಿದ್ದಾಪುರದ ಮಹಾತ್ಮಾ ಗಾಂಧಿ ಶತಾಬ್ಧಿ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ,ಆ ವಿಭಾಗದ ಮುಖ್ಯಸ್ಥರಾಗಿ ೧೯೭೩ ರಿಂದ ೨೦೦೪ ರ ವರೆಗೆ ಸೇವೆಸಲ್ಲಿಸಿದ್ದಾರೆ. ಅದೇ ಕಾಲೇಜಿನಲ್ಲಿ ೨೦೦೪ ರಿಂದ ೨೦೦೬ ರವರೆಗೆ ...
READ MORE