ಹಿಂದೂ ಧರ್ಮದ ಪಠ್ಯಪುಸ್ತಕ ಮಾಲೆಯಡಿ ಕೋಟ ವಾಸುದೇವ ಕಾರಂತ ಅವರ ’ನಮ್ಮ ಬ್ರಾಹ್ಮಣ್ಯ’ ಕೃತಿ ಪ್ರಕಟವಾಗಿದೆ. ಲೌಕಿಕ ವೃತ್ತಿಗಳಿಂದ ಬಾಳುತ್ತಿರುವ ಹೆಚ್ಚಿನ ಬ್ರಾಹ್ಮಣರಲ್ಲಿ ಹಿರಿಮೆಯ ಜ್ಞಾನ ಹಾಗೂ ಅದನ್ನು ಬಾಳಲಿಕ್ಕೆ ಬೇಕಾದ ಶಾಸ್ತ್ರಜ್ಞಾನ ತೀರಾ ಕಡಿಮೆಯಾಗುತ್ತಾ ಬಂದಿದೆ ಎಂದು ಲೇಖಕರು ವಿಷಾದಿಸಿದ್ದು, ಬ್ರಾಹ್ಮಣ್ಯತ್ವದ ಮಹತ್ವ ವಿವರಿಸಿದಲ್ಲಿ ಕೆಲವರಿಗಾದರೂ ಪೂರ್ವಜನ್ಮದ ವಾಸನೆಯ ಪ್ರೇರಣೆಯಿಂದ ಬ್ರಾಹ್ಮಣ್ಯತ್ವದ ಬಗ್ಗೆ ಉತ್ಸಾಹ ಉಂಟಾಗಬಹುದು ಎಂದು ಆಶಾ ಭಾವನೆಯಿಂದ ಕೃತಿ ಬರೆದಿರುವುದಾಗಿ ಲೇಖಕರು ಹೇಳಿದ್ದಾರೆ.
ಕೋಟ ವಾಸುದೇವ ಕಾರಂತ ಮೂಲತಃ ಮಣಿಪಾಲದವರು, ಜಾತಿ ಧರ್ಮದ ಮಹತ್ವ, ದೇಶದ ಉದ್ಧಾರಕ್ಕೆ ಏಕಮಾತ್ರ ದಾರಿ ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಕಾನ್ ಕ್ವೆಸ್ಟ್ ಆಫ್ ಬಾಡಿ’ ಇವರ ಆಂಗ್ಲ ಕೃತಿಯಾಗಿದೆ. ಮದರಾಸು ಸರಕಾರದಲ್ಲಿ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಆಗಿ ನಿವೃತ್ತರು.ಇವರ ವಿದ್ಯಾಭ್ಯಾಸ ಎಂ..ಎ.; ಎಫ್ ಐಇ. ...
READ MORE