ಗಾನಕೋಗಿಲೆ ಶ್ರೀ ರೇವಣಸಿದ್ದಯ್ಯ ಹಿರೇಮಠ' ಮಹತ್ವದ ಕೃತಿಯನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. 'ಸಾಹಿತ್ಯದೊಂದಿಗೆ ಸಂಗೀತ ಸೇರಿದರೆ ಚಿನ್ನದ ಹೂವಿಗೆ ಪರಿಮಳ ಬಂದಂತೆ' ಎಂಬ ಮಾತಿನಂತೆ ಸಂಗೀತ ಕ್ಷೇತ್ರದ ಅಸಾಮಾನ್ಯ ಸಾಧಕರಾದ ಶ್ರೀ ರೇವಣಸಿದ್ದಯ್ಯ ಹಿರೇಮಠರವರು ವೃತ್ತಿಯಲ್ಲಿ ಸಂಗೀತ ಶಿಕ್ಷಕರು, ಪ್ರವೃತ್ತಿಯಲ್ಲಿ ಅಪೂರ್ವ ಸಾಹಿತಿಗಳು. ಅಪಾರ ಲೋಕಾನುಭವವನ್ನು ಹೊಂದಿರುವಂತಹಇವರು 'ಗುರು ಪುಟ್ಟ ರಸಿಕಪ್ರಭು' ಅಂಕಿತದಲ್ಲಿ ಸಾಹಿತ್ಯ ಲೋಕಕ್ಕೆ ೧೫೫ ಆಧುನಿಕ ವಚನಗಳುಳ್ಳ 'ಶ್ರೀಗುರು ವಚನಾಮೃತ' ಎಂಬ ಮಹತ್ವದ ಹೊತ್ತಿಗೆ ಕನ್ನಡ ಸಾಹಿತ್ಯದ ಗಣಿಗೆ ಧಾರೆಯೆರೆದು ವಾಗ್ಗೇವಿಯ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ. ಹಸಿಗೋಡೆಯಲ್ಲಿ ಹರಳೊಗೆದಂತೆ ಇಲ್ಲಿನ ವಚನಗಳು ಪ್ರಖರ ವಿಚಾರಗಳಿಂದ ಗಮನಸೆಳೆಯುತ್ತವೆ. ಸುಂದರ ಸಮಾಜಕ್ಕಾಗಿನ ಹಿರೇಮಠರವರ ಪ್ರಾಂಜಲಭಾವ, ಕಾಳಜಿ ಅವರ ವಚನಗಳಲ್ಲಿ ಎದ್ದು ಕಾಣುತ್ತದೆ. ಮೊನಚಾದ ವಿಡಂಬನೆಯ ಮಾತುಗಳು ಎಂತಹ ದಪ್ಪ ಚರ್ಮದ ವ್ಯಕ್ತಿಯನ್ನೂ ಚುಚ್ಚಿ ಸನ್ಮಾರ್ಗಕ್ಕೆ ಕೊಂಡೊಯ್ಯುವಲ್ಲಿ ಪೂರಕವಾಗಿವೆ. ತಮ್ಮ ರಸವತ್ತಾದ ಜೀವನಾನುಭವಗಳನ್ನು ಆಧುನಿಕ ವಚನಗಳಲ್ಲಿ ದಾಖಲಿಸಿದ್ದಾರೆ.
https://bookflow.in/books/ಶ್ರೀಗುರು-ವಾಚನಾಮೃತ/
©2025 Book Brahma Private Limited.