ಕಂಟಕವನ್ನು ದೂರ ಮಾಡುವ ಗಂಡಕಿಯ ದೇವಶಿಲೆ ಎನ್ನುವ ಶೀರ್ಷಿಕೆಯಲ್ಲಿ ಸಾಲಿಗ್ರಾಮಗಳ ಕುರಿತಾಗಿ ಮಾಹಿತಿ ನೀಡಲಾದ ಕೃತಿ ಇದು. ದೇವಶಿಲೆ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಗಂಡಕಿ ನದಿ ತೀರದಲ್ಲಿ ದೊರಕುವ ಅಪರೂಪದ ಶಿಲೆಗಳೇ ಸಾಲಿಗ್ರಾಮಗಳು. ಇದರ ಉತ್ಪತ್ತಿಯ ಕುರಿತಾಗಿರುವ ಪುರಾಣಕಥೆ ಮತ್ತು ವೈಜ್ಞಾನಿಕ ತಳಹದಿಯಲ್ಲಿ ಲೇಖಕರು ಪುಸ್ತಕದಲ್ಲಿ ಮಾಹಿತಿ ನೀಡಿದ್ದಾರೆ. ಸಾಲಿಗ್ರಾಮದ ಮಹತ್ವ, ಲಕ್ಷಣ, ಪ್ರಭೇದಗಳನ್ನು ಸೇರಿದಂತೆ 100 ಸಾಲಿಗ್ರಾಮಗಳ ಪರಿಚಯವನ್ನು ಕೊಂಕಣಿ ಭಾಷೆಯಲ್ಲಿ ಲೇಖಕರು ಮಾಡಿಕೊಟ್ಟಿದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತ ಸಾಹಿತ್ಯದಲ್ಲಿ ಮೂರು ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಎಂ.ಎ. ಪಡೆದಿದ್ದು, ಪಿಎಚ್ ಡಿ ಪದವೀಧರರು- ಅರವಿಂದ ಚಂದ್ರಕಾಂತ ಶ್ಯಾನಭಾಗ, ಗಾಂಧಿ ಅಧ್ಯಯನ ಮತ್ತು ಜೈನಶಾಸ್ತ್ರ ಅಧ್ಯಯನ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. ಇವರು ಹವ್ಯಾಸಿ ಬರಹಗಾರರು. ಈವರೆಗೆ ಕನ್ನಡ ಮತ್ತು ಕೊಂಕಣಿಯಲ್ಲಿ 9 ಪುಸ್ತಕಗಳನ್ನು ಪ್ರಕಟಿಸಿದ್ದು, 300 ಕ್ಕೂ ಹೆಚ್ಚು ಲೇಖನಗಳನ್ನು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ವಿಜಯಪುರ, ಧಾರವಾಡ, ಮಂಗಳೂರು ಮತ್ತು ಕಾರವಾರ ಆಕಾಶವಾಣಿ ಕೇಂದ್ರಗಳಿಂದ ಇವರ ಚಿಂತನ, ಭಾಷಣ ಮತ್ತು ಸಂಸ್ಕ್ರತ ಪಾಠ ಮುಂತಾದ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ಕರಾವಳಿ ಮುಂಜಾವು ಮತ್ತು ಕನ್ನಡ ಜನಾಂತರಂಗ ದಿನಪತ್ರಿಕೆಗಳಲ್ಲಿ ...
READ MORE