ರೂಪ ಅಯ್ಯರ್ ಶ್ರೀವತ್ಸ ಅವರ “ಧರ್ಮ ಕರ್ಮ” ಕೃತಿಯು ಕರ್ಮ-ವಿಕರ್ಮ-ಅಕರ್ಮದ ಬಗ್ಗೆ ತಮಗಿರುವ ಅಭಿಪ್ರಾಯವನ್ನು ಹಾಗೂ ಮನುಷ್ಯನೊಬ್ಬ ತನ್ನ ಜೀವನದಲ್ಲಿ ತಳಿಯಬೇಕಾದ ಕೆಲವು ಮುಖ್ಯ ಅಂಶಗಳನ್ನು ಒಳಗೊಂಡಿದೆ. ಧರ್ಮಕ್ಕೂ-ಕರ್ಮಕ್ಕೂ ಇರುವ ನಂಟನ್ನು ಇಲ್ಲಿ ವಿವರಿಸಲಾಗಿದೆ. ಎಲ್ಲಾ ಕರ್ಮಗಳನ್ನೂ ಧರ್ಮದಿಂದಲೇ ಮಾಡಬೇಕು, ಪ್ರಾರಂಭದಲ್ಲಿ ಕಷ್ಟ ಆಗೂವುದಂತು ಸಹಜ, ಮುಂದೊಂದು ದಿನ ಜೀವನದಲ್ಲಿ ಕಷ್ಟ ಬಂದಾಗ ಹಿಂದಿನ ತಪ್ಪುಗಳನ್ನು ಯೋಚಿಸುವುದಕ್ಕಿಂತ ಹಿಂದೆ ಮಾಡಿದ ತಪ್ಪಿಗೆ ಶಿಕ್ಷೆ ಪಡೆಯಲು ಸಿದ್ದರಾಗಿರಬೆಕು, ಆದರೆ ಮುಂದೆ ಶಿಕ್ಷೆ ಅನುಭವಿಸುವ ದಿನ ಎದುರಾಗದಿದ್ದಂತೆ ಗಮನವಿಟ್ಟು ಇಂದಿನಿಂದಲೇ ಸಂತೋಷದಿಂದ ಪ್ರತಿಫಲಾಕ್ಷೆಯಿಲ್ಲದೆ ಕರ್ಮಾಚರಣೆ ಮಾಡಿ. ಧರ್ಮವನ್ನಳವಡಿಸಿ ಕೊಳ್ಳಬೇಕು ಎನ್ನೂವುದು ಲೇಖಕರ ಆಶಯ.
ಬರಹಗಾರ್ತಿ ರೂಪಾ ಅಯ್ಯರ್ ಶ್ರೀವತ್ಸ ಅವರು ಚಲನಚಿತ್ರ ನಿರ್ದೇಶಕಿ, ನಟಿ, ನೃತ್ಯ ಸಂಯೋಜಕಿ, ರೂಪದರ್ಶಿ, ವ್ಯವಹಾರ ಕಾರ್ಯನಿರ್ವಾಹಕಿ, ಮಾನವತಾವಾದಿ, ಲೋಕೋಪಕಾರಿ ಮತ್ತು ತತ್ವಜ್ಞಾನಿಯಾಗಿ ಗುರುತಿಸಿಕೊಂಡಿದ್ದಾರೆ. 1982 ಜನವರಿ 1ರಂದು ಇವರ ಜನನ. ಚಲನಚಿತ್ರದಲ್ಲಿನ ಕಲಾತ್ಮಕ ಸಾಧನೆಗಾಗಿ ರೂಪ ಅಯ್ಯರ್ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಪ್ರಸ್ತುತ ತನ್ನ ICA ಕಂಪನಿಯ ಮೂಲಕ ಜನರಲ್ಲಿ HIV ಏಡ್ಸ್ ಕುರಿತು ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅವರು `ಮುಖಪುಟ' ಮತ್ತು `ದಾಟು' ಚಿತ್ರದಲ್ಲಿ ನಟಿಸಿದ್ದಾರೆ ಮತ್ತು ನಿರ್ದೇಶಿಸಿದ್ದಾರೆ. ...
READ MORE