ಧರ್ಮಕ್ಕೆ ಸಂಬಂಧಿಸಿದ ವಿನೋಬಾ ಭಾವೆಯವರ ವಿಚಾರಗಳ ಸಂಕಲನವನ್ನು ಕನ್ನಡಕ್ಕೆ ಅನುವಾದ ಮಾಡಿದವರು ಬೆಳಗಾವಿಯ ನಾಗನೂರ ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮಿಗಳು. ’ಹಿಂದೂ’ಧರ್ಮ ಶಬ್ದವು ಬಹಳ ಪ್ರಚಲಿತವಾಗಿರುವುದರಿಂದ ಇದರ ನಿಮಿತ್ತವಾಗಿ ವ್ಯಕ್ತವಾದ ವಿಚಾರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಭಾರತದ ಸಂಪೂರ್ಣ ಜೀವನದೃಷ್ಟಿ ಮತ್ತು ಧಾರ್ಮಿಕ ಜೀವನದೃಷ್ಟಿಯನ್ನು ಇಲ್ಲಿ ಕೇಂದ್ರೀಕರಿಸಿದ್ಧಾರೆ. ವ್ಯಕ್ತಿಯ ಬದುಕಿನ ಆಧ್ಯಾತ್ಮಿಕ ಜೀವನವಿಕಾಸವನ್ನು ’ಧರ್ಮಾಮೃತ’ ಎಂಬ ಸಾರ್ವಕಾಲಿಕ ಮಹತ್ವದ ಕೃತಿಯ ಮೂಲಕ ಓದುಗರಿಗೆ ತಲುಪಿಸಿದ್ದಾರೆ.
ಪ್ರಸ್ತುತ ಯಡಿಯೂರು ಗದಗ ಡಂಬಳ್ ಮಠದ ಪೀಠಾಧಿಪತಿಯಾಗಿರುವ ಜಗದ್ಗುರು ಶ್ರೀ ಸಿದ್ಧರಾಮ ಸ್ವಾಮೀಜಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಡಿಸೆಂಬರ್ 12, 1958ರಲ್ಲಿ ಜಂಗಮ ಸಮಾಜದ ತಂದೆ ರುದ್ರಯ್ಯ, ತಾಯಿ ಶಾಂತಮ್ಮಳ ಉದರದಲ್ಲಿ ಜನಿಸಿದ ಬಾಲಕ ಗುರುಪಾದಯ್ಯ. ಮುಂದೆ ಬಿಳಗಿಯ ಕಲ್ಮಠದ ಶಾಖಾ ಮಠಕ್ಕೆ ಪೀಠಾಧಿಪತಿಯಾಗಿ ನೇಮಕಗೊಂಡರು. ಅದಾದ ಬಳಿಕ ಬನಾರಸ್ ವಿವಿಯಲ್ಲಿ ಎಂಎ ಹಿಂದಿ, ಸಂಸ್ಕೃತ ಹಾಗೂ ತತ್ವಶಾಸ್ತ್ರ ಉನ್ನತ ವ್ಯಾಸಂಗ ಪಡೆದುಕೊಂಡರು. ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ 1994ರಲ್ಲಿ ಪೀಠಾಧಿಪತಿಯಾಗಿ ನೇಮಕಗೊಂಡರು. ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳ ಉತ್ತರಾಧಿಕಾರಿಯಾಗಿ ಇಡೀ ಮಠದ ಜವಾಬ್ದಾರಿಯನ್ನು ವಹಿಸಿಕೊಂಡು ಹಿಂದಿನ ಮಠಾಧೀಶರ ...
READ MORE