`ಆತ್ಮಶಕ್ತಿಯಿಂದ ಆರೋಗ್ಯ ವೃದ್ಧಿ ಹಾಗೂ ಸನಾತನ ಧರ್ಮದ ಸಂಬಂಧ’ ವಿ.ಗಣೇಶ್ ಅವರ ಅಧ್ಯಯನ ಕೃತಿಯಾಗಿದೆ. ಕ್ಯಾನ್ಸರ್ ನಂತಹ ಚಿಕಿತ್ಸೆಯಲ್ಲಿ ಕೇವಲ ಆಯುರ್ವೇದ ಅಥವಾ ಕೇವಲ ಅಲೋಪತಿ ಅಥವಾ ಬರೀ ಯೋಗ, ಅಧ್ಯಾತ್ಮ ಇತ್ಯಾದಿಗಳೆಂದು ಒಂದೇ ಬಗೆಯ ಚಿಕಿತ್ಸೆಯ ಬಗ್ಗೆ ಪೂರ್ವಾಗ್ರಹ ಪೀಡಿತರಾಗದೇ ಸಮಯ ಸಂದರ್ಭ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಯೋಚಿಸಿ ಎಲ್ಲವನ್ನು ಒಳಗೊಂಡ ಸಮನ್ವಯುತ ವೈದ್ಯ ಪದ್ಧತಿಯನ್ನು ಅನುಸರಿಸುವುದು ಸೂಕ್ತ ಎಂದು ತಿಳಿಸುವ ಕೃತಿಯಾಗಿದೆ ಎಂದು ವೀಣಾ ಎಸ್.ಭಟ್ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.