ಲಕ್ಷ್ಮಿ-ನಾರಾಯಣ, ವಸಿಷ್ಠ-ಆರುಂಧತಿ, ರತಿ-ಮನ್ಮಥ, ಪಾರ್ವತಿ-ಪರಮೇಶ್ವರ, ಇಂದ್ರ-ಇಂದ್ರಾಣಿ ಹೀಗೆ ಅನ್ಯೋನ್ಯತೆಗೆ ಸಂಕೇತವಾದ ದಂಪತಿಗಳಿವರು ಎಂಬ ನಂಬಿಕೆಯಂತೆ ಏಳು ಸೂತ್ರಗಳ ಪಾವಿತ್ಯ್ರತೆಯನ್ನು ನೂತನ ವರ-ವಧುವಿಗೆ ತಿಳಿಸುವ ಬೋಧನೆ ಪದ್ಧತಿಯು ಸಪ್ತಪದಿ.
ಈ ಸಪ್ತಪದಿಯಲ್ಲಿ ಏಳು ವಿವಾಹ ಮಹೋತ್ಸವದ ಸೂತ್ರಗಳಿವೆ. ನಂತರ, ಹೆಣ್ಣು-ಗಂಡನ್ನು ಕುರಿತು, ಅವರ ಕುಲವನ್ನು ಕುರಿತು, ಅಲಂಕಾರ ಕುರಿತು, ಮದುವೆ ಮನೆ, ಅಲ್ಲಿಯ ಸಜ್ಜನರು, ಮದುವೆಯ ಹೆಜ್ಜೆಗಳು ಹಾಗೂ ಹೆಣ್ಣನ್ನು ಗಂಡಿನ ಮನೆಗೆ ಒಪ್ಪಿಸುವ ಪದ್ಧತಿ ಹೀಗೆ ಎಲ್ಲ ಹಂತಗಳ ವರ್ಣನೆ ಇದೆ. ಸಪ್ತಪದಿಯ ಗದ್ಯಾನುವಾದವೂ ನೀಡಲಾಗಿದೆ. ಪ್ರಾಚೀನ ಧರ್ಮಶಾಸ್ತ್ರಜ್ಞರು ಹೇಳಿರುವ ದಾಂಪತ್ಯದ ಮಹತ್ವ ತಿಳಿಸುವ ಶ್ಲೋಕಗಳು ಇಲ್ಲಿವೆ.
ಸಂಚಿ ಹೊನ್ನಮ್ಮ ಅವರು ಬರೆದ ಹದಿಬದಿಯ ಧರ್ಮ ಕೃತಿಯಿಂದ ನಾಂದಿ ಮಂಗಳವನ್ನು ಹಾಗೂ ಹರಿಹರ ಕವಿಯ ಗಿರಿಜಾ ಕಲ್ಯಾಣದಿಂದ ಪಾರ್ವತಿ-ಪರಮೇಶ್ವರನ ವಿವಾಹವನ್ನು ಹಾಗೂ ನಾಗಚಂದ್ರನ ಶ್ರೀರಾಮಚರಿತ ಪುರಾಣದಿಂದ ಸೀತಾರಾಮ ವಿವಾಹ ಪ್ರಸಂಗವನ್ನು ರುದ್ರಭಟ್ಟನು ಬರೆದ ಜಗನ್ನಾಥ ವಿಜಯದಿಂದ ಶ್ರೀಕೃಷ್ಣ-ರುಕ್ಮಿಣಿ ವಿವಾಹ, ಪಂಪ ಕವಿಯ ವಿಕ್ರಮಾರ್ಜುನ ವಿಜಯದಿಂದ ಸುಭದ್ರಾರ್ಜುನರ ವಿವಾಹ ಪ್ರಸಂಗ, ಪಂಪ ಕವಿಯ ಆದಿಪುರಾಣದಲ್ಲಿಯ ಶ್ರೀಮತಿ ವಜ್ರಜಂಘರ ವಿವಾಹ, ರತ್ನಾಕರನ ಭರತೇಶ ವೈಭವದಿಂದ ಭರತ-ಸುಭದ್ರಾದೇವಿಯರ ವಿವಾಹ, ಅಂಡಯ್ಯ ಕವಿ ಬರೆದ ಕಬ್ಬಿಗರ ಕಾವ ಕೃತಿಯಲ್ಲಿಯ ರತಿ-,ಮನ್ಮಥರ ವಿವಾಹ ಹೀಗೆ ಪ್ರಸಂಗಗಳನ್ನು ಸೇರಿಸಿ ಸಪ್ತಪದಿ ಕೃತಿಯನ್ನು ಮಹತ್ವವಾಗಿಸಿದೆ.
ಈ ಕೃತಿಯನ್ನು 1951ರಲ್ಲಿ ಬೆಂಗಳೂರಿನ ಬಿಬಿಡಿ ಪವರ್ ಪ್ರೆಸ್ ನವರು ಮೊದಲ ಬಾರಿಗೆ (ಪುಟ: 154, ಬೆಲೆ: 2 ರೂ.) ಪ್ರಕಟಿಸಿದ್ದರು.
©2024 Book Brahma Private Limited.