ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಶ್ರೀ ಬೀರೇಶ್ವರ,ಶ್ರೀ ಸಿದ್ದೇಶ್ವರ ಸ್ವಾಮಿ ದೇವರ ಹಾಗೂ ಸರ್ವ ಧರ್ಮದ ದೇವಾನುದೇವತೆಗಳ ಚರಿತ್ರೆ ಹಾಗೂ ಪವಾಡಗಳನ್ನು ಒಳಗೊಂಡ ಭಕ್ತಿ ಗ್ರಂಥ-ಬನ್ನಿ ಪುಲಿಗೆರೆಯ ಪುಣ್ಯಕ್ಷೇತ್ರಕ್ಕೆ. ಭಕ್ತರಿಗೆ ಈ ಕ್ಷೇತ್ರದ ಪೂರ್ಣ ಪೌರಾಣಿಕ, ಐತಿಹಾಸಿಕ ಹಾಗೂ ಧಾರ್ಮಿಕ ಮಾಹಿತಿ ನೀಡುತ್ತದೆ.
ಕೃತಿಗೆ ಬೆನ್ನುಡಿ ಬರೆದ ಹಿರಿಯ ಸಾಹಿತಿ ಡಾ. ನಿಂಗಣ್ಣ ಮುದೇನೂರು ‘ಪುಲಿಗೆರೆಯ ಪುಣ್ಯಕ್ಷೇತ್ರದ ಚರಿತ್ರೆಯನ್ನು ಡೊಳ್ಳಿನ ಹಾಡುಗಳ ಹಿನ್ನೆಲೆಯಲ್ಲಿ ಮತ್ತು ಭಿನ್ನ ಭಿನ್ನ ಸಂಸ್ಕೃತಿಗಳ ದೇವರುಗಳ ಹಿನ್ನೆಲೆಯಲ್ಲಿ ಜಾತ್ಯತೀತ ಮನೋಭಾವದ ನೆಲೆಯಲ್ಲಿ ಲೇಖಕರು ತಮ್ಮ ವಿಚಾರವನ್ನು ಮಂಡಿಸಿದ್ದಾರೆ. ಮೇಲ್ನೋಟಕ್ಕೆ ಇದು ಧಾರ್ಮಿಕ ಗ್ರಂಥವಾಗಿ ಕಾಣಿಸಿದರೂ ಆಂತರ್ಯದೊಳಗೆ ಚರಿತ್ರೆ, ಇತಿಹಾಸ ಹಾಗೂ ಪರಂಪರೆಯ ಚಹರೆಗಳು ಇವೆ’ ಎಂದು ಪ್ರಶಂಸಿಸಿದ್ದಾರೆ.
ಹಾಲುಮತದ ಮೂಲಗುರು ಶ್ರೀ ರೇವಣಸಿದ್ದೇಶ್ವರ ವಚನ ಹಾಗೂ ಚರಿತ್ರೆ, ,ಶ್ರೀ ಮಾಲತೇಶ ಸ್ವಾಮಿ ದೇವರು, ಬೀರದೇವರ ಚರಿತ್ರೆ, ಶ್ರೀ ನಾರಾಯಣ ದೇವರು, ಏಳುಕೋಟಿ ಮೈಲಾರಲಿಂಗ ಸ್ವಾಮಿ, ಹಜರತ್ ಮಲ್ಲಿಕ್ ಶಾದತ್ ಶರಣರ ಗುಮ್ಮಜ ಹಾಗೂ ದೂದನಾನಾ ಶರಣರು, ಶಿಸುನಾಳ ಶರೀಫ್-ಗೋವಿಂದ ಭಟ್ಟ ಶರಣರು ಹೀಗೆ ಸುಮಾರು 40 ಅಧ್ಯಾಯಗಳಡಿ ಕ್ಷೇತ್ರದ ಮಹಿಮೆಯನ್ನು ವರ್ಣಿಸಲಾಗಿದೆ.
©2025 Book Brahma Private Limited.