‘ಪಾಶುಪತಾಸ್ತ್ರ ಪ್ರದಾನ’ ಕೃತಿಯು ಕುಮಾರವ್ಯಾಸ ಭಾರತದ ವ್ಯಾಖ್ಯಾನಬಂಧವಾಗಿದೆ. ಸತ್ಯವತಿ ರಾಮನಾಥ ಕೃತಿಯ ಲೇಖಕಿ. ಕೃತಿಯೊಳಗೆ, `ಗಮಕಿ' ಎಂಬ ತಾಯಿಯು ಆ ಹಾಲನ್ನು ಕರೆದು 'ರಾಗ' ಎಂಬ ಅಗ್ನಿಯಲ್ಲಿ ಅದನ್ನು ಹದಗೊಳಿಸಿ ಪದವಿಭಾಗ ವಾಕ್ಯವಿಭಾಗ 'ವಾಚನ'ವೆಂಬ ಪಾತ್ರೆಯ ಮೂಲಕ 'ಶೋತೃ' ಎಂಬ ಮಗುವಿಗೆ ಕುಡಿಸುತ್ತಾಳೆ. ಈ ಕಾವ್ಯಸುಧೆಯನ್ನು - ರುಚಿಯನ್ನು ವ್ಯಾಖ್ಯಾನ' ಎಂಬ 'ಸಕ್ಕರೆ'ಯ ಮೂಲಕ ಹೆಚ್ಚಿಸಬಹುದು. ಕುಮಾರವ್ಯಾಸ ಕವಿಯ ಕರ್ನಾಟ ಭಾರತ ಕಥಾಮಂಜರಿಯಲ್ಲಿ ಅರಣ್ಯ ಪರ್ವದ 'ಪಾಶುಪತಾಸ್ತ್ರ ಪ್ರದಾನ'ದ ಕೆಲವು ಪದ್ಯಗಳಿಗೆ ವ್ಯಾಖ್ಯಾನವನ್ನು ವಿಸ್ತಾರವಾಗಿ ಬರೆದಿರುವುದನ್ನು ಇಲ್ಲಿ ಕಾಣಬಹುದು. ವೇದಾಂತ ಪಾರಿಭಾಷಿಕ ಶಬ್ದಗಳಿಗೆ ಇಲ್ಲಿ ಕೊಟ್ಟಿರುವ ವ್ಯಾಖ್ಯಾನ ಬಹಳ ಉಪಯುಕ್ತವಾಗಿದೆ ಎನ್ನುವ ಮಾಹಿತಿಯನ್ನು ತಿಳಿಸಲಾಗಿದೆ.
ಲೇಖಕಿ ಸತ್ಯವತಿ ರಾಮನಾಥ ಅವರು 1951ರಲ್ಲಿ, ಹಾಸನ ಜಿಲ್ಲೆಯ ಮರಿತಮ್ಮನ ಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಸೂರ್ಯನಾರಾಯಣಪ್ಪ ಮತ್ತು ತಾಯಿ ಅನಂತಲಕ್ಷ್ಮಿ. 1970ರಲ್ಲಿ ಬೆಂಗಳೂರು ವಿಶ್ವ ವಿದ್ಯಾನಿಲಯ ದಿಂದ ಬಿ.ಎಸ್ಸಿ.ಪದವಿಯನ್ನೂ, 1974ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪ್ರಥಮ ಶ್ರೇಣಿಯಲ್ಲಿ ಸಂಸ್ಕೃತ ಭಾಷೆಯ ಎಂ.ಎ. ಪದವಿಯನ್ನೂ ಗಳಿಸಿದರು. ಅವರು ಸಂಸ್ಕೃತ ಅಧ್ಯಾಪಕರಾಗಿ ಅನೇಕ ಮಹಾವಿದ್ಯಾಲಯಗಳಲ್ಲಿ ಮೂವತ್ತು ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದಾರೆ. ಮೂರುದಶಕಗಳಿಂದಲೂ ಗಮಕ ಕಾವ್ಯವಾಚನಗಳಿಗೆ ವ್ಯಾಖ್ಯಾನ ನೀಡುವುದರ ಮೂಲಕ ಕನ್ನಡದ ವರಕವಿಗಳಾದ ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ, ನರಹರಿ, ಕುವೆಂಪು ಮೊದಲಾದವರನ್ನು ಕೇಳುಗರಿಗೆ ಪರಿಚಯಿಸಿದ್ದಾರೆ. ಇವರ ಸಾವಿರಾರು ವ್ಯಾಖ್ಯಾನ ...
READ MORE