ಲಲಿತಾಂಬಾ ಚಂದ್ರಶೇಖರ್
(15 February 1929)
ಕತೆಗಾರ್ತಿ, ಲೇಖಕಿ ಲಲಿತಾಂಬಾ ಚಂದ್ರಶೇಖರ್ ಅವರು ಅನುವಾದಕಿ. ಇಂಗ್ಲಿಷ್ ಹಾಗೂ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಎಂ.ಇಡಿ., ಪಿ.ಜಿ.ಡಿ.ಟಿ.ಇ. ಪದವೀಧರೆ. ಹೈದ್ರಾಬಾದ್ ಶಿಕ್ಷಣ ವಿಶ್ವವಿದ್ಯಾಲಯದ ಪ್ರಾಂಶುಪಾಲರಾಗಿ ನಿವೃತ್ತರು. 15-02-1929 ರಂದು ಜನಿಸಿದ್ದು, ಮೂಲತಃ ದಾವಣಗೆರೆಯವರು. ತಂದೆ ಬಿ. ಎಸ್. ವೆಂಕಟಕೃಷ್ಣಯ್ಯ, , ತಾಯಿ ಎಸ್. ಪಾರ್ವತಮ್ಮ. ‘ಪರ್ಲ್ ಎಸ್, ಬಕ್’ ಅವರ ಸಣ್ಣಕತೆಗಳನ್ನು ಕನ್ನಡಕ್ಕೆ 1952ರಲ್ಲಿ ಭಾಷಾಂತರಿಸಿದ್ದಾರೆ. `ಮುಕುಂದ ಚಂದ, ಪುನರ್ದತಾ, ರೇಖಾ ಭಾಗ-1, ಭಾಗ-2, ಸರಸ್ವತಿ ಸಂಹಾರವೇ?, ಸ್ವೀಕಾರ , ಸುಕನೈಯರು' ಕೃತಿಗಳನ್ನು ಹೊರತಂದರು. ಅವರ ‘ವಿಮೋಚನೆ’ ನೀಳ್ಗತೆ 1954ರಲ್ಲಿ, ‘ಬಿಡಿ ಹೂಗಳು’ 1966ರಲ್ಲಿ, ‘ನಾದದ ಹಾದಿಯಲ್ಲಿ’ ಎಂಬ ಅವರ ಕಥಾ ಸಂಕಲನಗಳು ಪ್ರಕಟವಾಗಿವೆ. ಅವರ ಸಾಹಿತ್ಯ ಮತ್ತು ...
READ MORE