ಲೇಖಕ ಪಂಚಾಕ್ಷರಿ ಬಿ. ಪೂಜಾರಿ ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶ್ರೀ ದಂಡಗುಂಡ ಬಸವೇಶ್ವರರ ಕುರಿತು 108 ನಾಮಾವಳಿಗಳನ್ನು ಬರೆದ ಕೃತಿ ಇದು. ದೇವರ ನಾಮಾವಳಿಗಳನ್ನು ಪಠಿಸುವುದು ಭಕ್ತಿಯ ದ್ಯೋತಕವಾಗಿದೆ. ದೇವರಲ್ಲಿ ಮನವನ್ನು ಕೇಂದ್ರೀಕರಿಸುವ ಸಾಧನವೂ ಹೌದು. ದಂಡಗುಂಡ ಬಸವಣ್ಣ ದೇವರ ದೈವತ್ವದ ಸಾಧನೆಗಳು, ಸಾಮರ್ಥ್ಯಗಳನ್ನು ಪ್ರಶಂಸಿಸುವ ವಿಶೇಷಣಗಳು ಇಲ್ಲಿಯ ನಾಮಾವಳಿಗಳು ಭಕ್ತರನ್ನು ಪರವಶಗೊಳಿಸುತ್ತವೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಉಚಿತವಾಗಿ ನೀಡಬೇಕೆಂಬ ಉದ್ದೇಶದೊಂದಿಗೆ ಈ ಕೃತಿಗೆ ಬೆಲೆ ನಮೂದಿಸಿಲ್ಲ.
ಕವಿ ಪಂಚಾಕ್ಷರಿ ಬಿ. ಪೂಜಾರಿ ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗ್ರಾಮದವರು. ವೃತ್ತಿಯಿಂದ ದಂಡಗುಂಡ ಬಸವಣ್ಣನ ದೇವಸ್ಥಾನದ ಅರ್ಚಕರು. ಬಿ.ಎ. ಪದವೀಧರರು. ತಂದೆ ಬಸವಣ್ಣೆಪ್ಪ ಪೂಜಾರಿ ತಾಯಿ ಮಹಾದೇವಮ್ಮ ಪೂಜಾರಿ. ದಂಡಗುಂಡ ಸರಕಾರಿ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ (ಎಸ್.ಡಿ.ಎಂ.ಸಿ) ಅಧ್ಯಕ್ಷರು. ಕಸಾಪ ದಿಗ್ಗಾವಿ ವಲಯ ಅಧ್ಯಕ್ಷರು. ಕೃತಿಗಳು: ಅಂತರಾಳದ ಪ್ರಭೆ (ವಚನಗಳ ಸಂಕಲನ), ಗುಡ್ಡದ ಗುಡುಗು (ತತ್ವಪದಗಳ ಸಂಕಲನ), ಮನದಾಳದ ಮಾತು (ನುಡಿಮುತ್ತುಗಳು), ತತ್ವಪದ ಸಂಪದ (ತತ್ವಪದಗಳ ಸಂಪಾದನಾ ಗ್ರಂಥ), ದಂಡಗುಂಡ ಬಸವಣ್ಣ ನಾಮಾವಳಿ, ಸರಳೀಕರಣ ಇಷ್ಟಲಿಂಗ ಪೂಜಾ ವಿಧಾನ, ದಿಗ್ಗಾವಿ ದೀಪ (ಕವನ ಸಂಕಲನ) ಪ್ರಶಸ್ತಿ-ಗೌರವಗಳು: ಚಿತ್ತಾಪುರ ತಾಲೂಕು ಕನ್ನಡ ...
READ MORE