ಪ್ರೊ. ವಿಷ್ಣು ಜೋಶಿ ಅವರು ಷೋಡಶ ಸಂಸ್ಕಾರವೂ ಒಂಗೊಂಡಂತೆ ಒಟ್ಟು ಸಂಸ್ಕಾರಗಳ ಸೌರಭವನ್ನು ಈ ಕೃತಿಯ ಮೂಲಕ ಪರಿಚಯಿಸಿದ್ದಾರೆ. ಮಕ್ಕಳಗೆ ಈ ಸಂಸ್ಕಾರಗಳ ಅರಿವು ಮುಖ್ಯ. ಸಂಸ್ಕಾರಗಳನ್ನು ತಿಳಿಸದಿದ್ದರೆ ಮಕ್ಕಳೂ ತಮ್ಮ ಮನ ಬಂದಂತೆ ವರ್ತಿಸಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಹೀಗಾಗಿ, ಶಾಲಾ ಶಿಕ್ಷಣಕ್ಕಿಂತ ಸಂಸ್ಕಾರಗಳ ಕಲಿಕೆ ಬಹು ಮುಖ್ಯ. ಮಗುವಿನ ಬೆಳವಣಿಗೆಯ ವಿವಿಧ ಹಂತದಲ್ಲಿ ವಿವಿಧ ಸಂಸ್ಕಾರಗಳನ್ನು ಆಚರಣೆ ಮೂಲಕ ನೀಡುಲಾಗುತ್ತದೆ. ಇಂತಹ ಸಂಸ್ಕಾರಗಳ ಕುರಿತು ಮಕ್ಕಳಿಗೂ, ದೊಡ್ಡವರಿಗೂ ತುಂಬಾ ಉಪಯುಕ್ತ ಕೃತಿ ಇದು.
ವಿಷ್ಣು ಜೋಷಿ ಅವರು ಮೂಲತಃ ಕುಮಟಾ ತಾಲೂಕಿನ ಕಲ್ಲಬ್ಬಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತ ಮತ್ತು ಕನ್ನಡ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರು. ಕುಮಟಾದ ಡಾ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದಲ್ಲಿ ಹಿರಿಯ ಶ್ರೇಣಿಯ ಉಪನ್ಯಾಸಕರಾಗಿದ್ದಾರೆ. ಅಸ್ಖಲಿತ ಸಾಂಸ್ಕೃತಿಕ ವಾಗ್ಮಿಗಳು. ರಾಮಾಯಣ, ಮಹಾಭಾರತ, ವೇದ, ಉಪನಿಷತ್ತು, ಭಗವದ್ಗೀತೆ, ಭಾಗವತ, ಸಂಸ್ಕೃತ ಕಾವ್ಯ ಮತ್ತು ನಾಟಕಗಳ ಬಗ್ಗೆ ನಾಡಿನಾದ್ಯಂತ ಉಪನ್ಯಾಸ ನೀಡಿದ್ದಾರೆ. ಕೃತಿಗಳು: ಮಂದಾರ(ಕವನಸಂಕಲನ), ಕನ್ನಡ ಮೇಘದೂತ, ಕನ್ನಡ ಕುಮಾರ ಸಂಭದ, ಪದ್ಯಾನುವಾದಗಳು, ದರ್ಶನ ಸಂಗ್ರಹ, ಸಾಂಖ್ಯಕಾರಿಕಾ, ಸಂಸ್ಕೃತ ಸಾಹಿತ್ಯ ಪ್ರವೇಶ(ಪಠ್ಯ), ಭಾಸ ಕವಿಯ ಸುಭಾಷಿತಗಳು, ...
READ MORE