ಹಿರಿಯ ಸಾಹಿತಿ ಶಂಕರ ಅಜ್ಜಂಪುರ ಅವರ ‘ವೇದ ಪುರಾಣ’ ಎಂಬ ಕೃತಿಯು ಸನಾತನ ಸಂಸ್ಕೃತಿಯ ಮೂಲವಾದ ವೇದಗಳ ಸಂಹಿತೆಯ ವಿವರಗಳನ್ನು ಸರಳ ಕನ್ನಡದಲ್ಲಿ ಹೇಳಿರುವ ವಿಶೇಷವಾದ ಕೃತಿ. ವೇದಗಳ ಇತಿಹಾಸ, ವ್ಯಾಪ್ತಿ, ವಸ್ತು-ವಿಷಯ, ಸ್ವಾರಸ್ಯಗಳನ್ನು ಕುರಿತಂತೆ ಅನೇಕರಿಗೆ ಇರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಈ ಕೃತಿ ಸೂಕ್ತವಾಗಿದೆ. ಕೃತಿಕಾರರೇ ಹೇಳುವಂತೆ ಆರು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸದ್ದಿಲ್ಲದೆ ಪ್ರಾರಂಭವಾದ ‘ವೇದ ಪರಿಚಯ’ ಎಂಬ ಪೇಜ್, ದಿನಕಳೆಯುತ್ತಲೇ ಜನರಿಗೆ ತುಂಬಾ ಹತ್ತಿರವಾಗಿ ಬಿಟ್ಟಿತು. ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಪ್ರಶ್ನೋತ್ತರ ರೂಪದಲ್ಲಿ ಬರೆಯುವುದನ್ನು ಆರಂಭಿಸಿದ ಜನರಿಗೆ ಸರಳ, ಸುಲಭ ವಿಧಾನದಲ್ಲಿ ವೇದಗಳ ಬಗೆಗೆ ತಿಳಿವಳಿಕೆ ನೀಡಲು ಸಾಧ್ಯವಾಗಿದೆ. ವೇದಗಳು ರಚಿಸಿದವರು ಯಾರು ?, ವೇದ-ಶಾಸ್ತ್ರ ಇವೆರಡರ ನಡುವಿನ ವ್ಯತ್ಯಾಸ, ವೇದಗಳು ಎಷ್ಟು ಪುರಾತನ, ಯಜುರ್ವೇದ ಸಂಹಿತೆ, ಸಾಮವೇದ ಸಂಹಿತೆಯ ಬಗೆಗಿನ ಮಾಹಿತಿ ಹೀಗೆ ಸಾಮಾನ್ಯ ಜನರಿಗೂ ವೇದದ ಸಂಪೂರ್ಣ ಜ್ಞಾನವನ್ನು ಧಾರೆ ಎರೆಯುವ ಲೇಖಕನ ಪ್ರಯತ್ನ ಇಲ್ಲಿ ಎದ್ದು ಕಾಣುವಂತಿದೆ.
©2024 Book Brahma Private Limited.