ಹಣತೆ ಎಂದೂ ಮಾತನಾಡುವುದಿಲ್ಲ. ಆದರೆ ಅದು ತನ್ನ ಬೆಳಕಿನಿಂದ ತನ್ನ ಇರುವಿಕೆಯನ್ನು ಸಾರಿ ಹೇಳುತ್ತದೆ. ಅದರಂತೆ ಸಾಧಕರಾದವರು ಎಂದಿಗೂ ಮಾತನಾಡುವುದಿಲ್ಲ. ಅವರು ಮಾಡಿದ ಸಾಧನಗಳೇ ಮಾತನಾಡುತ್ತವೆ ಎನ್ನುವಂತೆ ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಅಧ್ಯಾತ್ಮದ ಮೇರು ಸಾಧಕರು. ಅವರ ಪ್ರವಚನದ ಜಾಡು ಹಿಡಿದು ಹೊರಡುವುದೆಂದರೆ ಸಾಗರವನ್ನು ಬಿಂದಿಗೆಯಲ್ಲಿ ತುಂಬಿದಂತೆ. ಅಂತಹ ಅವರ ಅಸ್ಖಲಿತ ಪ್ರವಚನದ ಮೂಲಾಶಯಕ್ಕೆ ಭಂಗ ಬಾರದಂತೆ ಅದರ ಸಾರವನ್ನು ಹಿಡಿದಿಡುವುದು ಕಷ್ಟದ ಕೆಲಸ.
ಆದರೆ ಅದನ್ನು ಅಷ್ಟೇ ಸಲೀಸಾಗಿ ಈ ಕೃತಿಯಲ್ಲಿ ಸೆರೆ ಹಿಡಿಯಲಾಗಿದೆ ಮಾತ್ರವಲ್ಲ ಅವರು ಹೇಳುತ್ತಿದ್ದ ವಚನದ ಒಂದು ಎಳೆಯನ್ನೇ ಹಿಡಿದು ಪ್ರವಚನದ ಆರಂಭದಲ್ಲಿ ಒಂದು ವಚನ ಕೊನೆಯಲ್ಲಿ ಮತ್ತೊಂದು ವಚನ ಬಳಸಿರುವುದು ಈ ಕೃತಿಯ ವಿಶೇಷವಾಗಿದೆ. ನಾಡಿನ ಜಾನಪದ ತಜ್ಞ, ಶರಣ ಸಾಹಿತಿ ಗೊ.ರು.ಚನ್ನಬಸಪ್ಪ ಮುನ್ನುಡಿ ಬರೆದು ಅದನ್ನು ಮುಂಗಾಣಿಕೆ ಎಂದು ಕರೆದಿದ್ದಾರೆ. ಲೇಖಕ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಬೆನ್ನುಡಿ ಬರೆದಿದ್ದಾರೆ.
©2024 Book Brahma Private Limited.