‘ಸಂಸ್ಕೃತಿ ಸಿಂಚನ’ ಕೃತಿಯು ಸತ್ಯವತಿ ರಾಮನಾಥ ಅವರ ಲೇಖನಸಂಕಲನವಾಗಿದೆ. ಇಲ್ಲಿ ಆಧ್ಯಾತ್ಮದ ಕುರಿತ ವಿಚಾರಗಳನ್ನು ಕಟ್ಟಿಕೊಡುವ ಲೇಖಕಿ, ಸಂಸ್ಕಾರದ ಮಹತ್ವನ್ನು ತಿಳಿಸುತ್ತಾರೆ. ದೀಪ, ಬಸವ ಹಾಗೂ ಆಧ್ಯಾತ್ಮಿಕ ವಿಚಾರಗಳನ್ನು ಕಟ್ಟಿಕೊಡುತ್ತದೆ. ಪೌರಣಿಕ ಸ್ಥಳಗಳು ಕೂಡ ಈ ಕೃತಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಭಾರತೀಯ ಸಂಸ್ಕೃತಿಯನ್ನು ಕಟ್ಟಿಕೊಡುವ ಈ ಕೃತಿಯು ಸಂಸ್ಕಾರದ ಕುರಿತ ಹಲವಾರು ವಿಚಾರಗಳನ್ನು ವಿವರಿಸುತ್ತದೆ.
ಲೇಖಕಿ ಸತ್ಯವತಿ ರಾಮನಾಥ ಅವರು 1951ರಲ್ಲಿ, ಹಾಸನ ಜಿಲ್ಲೆಯ ಮರಿತಮ್ಮನ ಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಸೂರ್ಯನಾರಾಯಣಪ್ಪ ಮತ್ತು ತಾಯಿ ಅನಂತಲಕ್ಷ್ಮಿ. 1970ರಲ್ಲಿ ಬೆಂಗಳೂರು ವಿಶ್ವ ವಿದ್ಯಾನಿಲಯ ದಿಂದ ಬಿ.ಎಸ್ಸಿ.ಪದವಿಯನ್ನೂ, 1974ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪ್ರಥಮ ಶ್ರೇಣಿಯಲ್ಲಿ ಸಂಸ್ಕೃತ ಭಾಷೆಯ ಎಂ.ಎ. ಪದವಿಯನ್ನೂ ಗಳಿಸಿದರು. ಅವರು ಸಂಸ್ಕೃತ ಅಧ್ಯಾಪಕರಾಗಿ ಅನೇಕ ಮಹಾವಿದ್ಯಾಲಯಗಳಲ್ಲಿ ಮೂವತ್ತು ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದಾರೆ. ಮೂರುದಶಕಗಳಿಂದಲೂ ಗಮಕ ಕಾವ್ಯವಾಚನಗಳಿಗೆ ವ್ಯಾಖ್ಯಾನ ನೀಡುವುದರ ಮೂಲಕ ಕನ್ನಡದ ವರಕವಿಗಳಾದ ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ, ನರಹರಿ, ಕುವೆಂಪು ಮೊದಲಾದವರನ್ನು ಕೇಳುಗರಿಗೆ ಪರಿಚಯಿಸಿದ್ದಾರೆ. ಇವರ ಸಾವಿರಾರು ವ್ಯಾಖ್ಯಾನ ...
READ MORE