ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 213ನೇ ಪುಸ್ತಕ ಬಿ.ವಿ. ಕಾರಂತ. ರಂಗಸಾಗರ ಬಿ.ವಿ. ಕಾರಂತ ದೇಶದ ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ರಂಗಭೂಮಿಯ ಭೀಷ್ಮ. ಬಿ. (ಬಾಬುಕೋಡಿ) ವಿ.(ವೆಂಕಟರಮಣ) ಕಾರಂತರು (1928-2002) ದಕ್ಷಿಣ ಕನ್ನಡದವರು. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅದ್ಭುತವೆನ್ನಬಹುದಾದ ಚಲನಚಿತ್ರಗಳು, ರಂಗಕೃತಿಗಳು, ರಂಗಸಂಗೀತವನ್ನು ಸೃಷ್ಟಿಸಿದ ಪದ್ಮಶ್ರೀ ಬಿ.ವಿ. ಕಾರಂತರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ರಾಗಿದ್ದವರು. ಮಧ್ಯಪ್ರದೇಶದ ರಂಗಮಂಡಲ ಮತ್ತು ಮೈಸೂರಿನ ರಂಗಾಯಣಗಳ ಮೂಲಕ ದೇಶದ ರಂಗಭೂಮಿಗೆ ಹೊಸ ಚಿಂತನೆಗಳನ್ನು ಮತ್ತು ಆಯಾಮಗಳನ್ನು ನೀಡಿದವರು ಬಿ.ವಿ. ಕಾರಂತರು. ಕಾರಂತರ ಬದುಕು-ಸಾಧನೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ.
©2025 Book Brahma Private Limited.