ಕಾಸರಗೋಡಿನಲ್ಲಿ ’ಪ್ರಿನ್ಸಿಪಾಲ್’ ಎಂದೇ ಚಿರಪರಿಚಿತ ಆಗಿದ್ದ ಶಾಮ ಭಟ್ಟ ಅವರ ಬಗ್ಗೆ ಕಾಂತಾವರದ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಮಾಲೆಯ 192ನೇ ಪುಸ್ತಕ. ಎರಡುವರೆ ದಶಕಗಳ ಕಾಲ ಪ್ರಾಚಾರ್ಯರಾಗಿದ್ದ ಶಾಮ ಭಟ್ಟರು ವಿದ್ಯಾರ್ಥಿಗಳ ಹಿತ ಕಾಪಾಡುವದರ ಜೊತೆಗೆ ಶಿಕ್ಷಣದ ಮಹತ್ವ ಸಾರುವಂತೆ ನಡೆದುಕೊಂಡವರು. ಅವರ ಬದುಕು-ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ.
ಕವಯತ್ರಿ ಸೌಮ್ಯ ಅವರು 1988 ಮೇ 30 ರಂದು ಕಾಸಗೋಡಿನಲ್ಲಿ ಜನಿಸಿದರು. ತಂದೆ ಪಿ. ಮಹಾಲಿಂಗಭಟ್, ತಾಯಿ ಬಿ. ಮೀನಾಕ್ಷಿ. ಅವರ 'ವಾಮನನ ಬೆರಗು' ಕವನ ಸಂಕಲನ (2007) ಬಿಡುಗಡೆಯಾಗಿದೆ. ...
READ MORE