ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 214 ಪುಸ್ತಕ ಪ್ರೊ. ಎಂ. ರಾಮಚಂದ್ರ. ಕನ್ನಡ ಸಾಹಿತ್ಯ ಪರಿಚಾರಕ ಪ್ರೊ. ಎಂ.ರಾಮಚಂದ್ರ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನವರು. ಎಂ.ರಾಮಚಂದ್ರರು (1939) ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡವರು. ನಿರಂತರವಾಗಿ ಸಾಹಿತ್ಯ ಸಂಬಂಧಿ ಲೇಖನಗಳ ರಚನೆ ಹಾಗೂ ವಿಮರ್ಶೆಗಳಲ್ಲಿ ತೊಡಗಿಸಿಕೊಂಡಿದ್ದವರು. ಕಾರ್ಕಳದ ಭುವನೇಂದ್ರ ಕಾಲೇಜಿನ ಸಾಹಿತ್ಯ ಸಂಘದ ಅಧ್ಯಕ್ಷ ರಾಗಿ ತನ್ನ ನಿವೃತ್ತಿಯ ತನಕವೂ ಅದನ್ನು ಮುನ್ನಡೆಸಿದ ಅವರು ಈಗ ಕಾರ್ಕಳ ಸಾಹಿತ್ಯ ಸಂಘವನ್ನು ಕಟ್ಟಿ ಅದರ ಮೂಲಕ ನಿರಂತರ ಸಾಹಿತ್ಯಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಸುಮಾರು ಹನ್ನೆರಡು ಸ್ವತಂತ್ರ ಕೃತಿಗಳನ್ನು ರಚಿಸಿರುವ ರಾಮಚಂದ್ರ ಅವರು ಹತ್ತಕ್ಕೂ ಮಿಕ್ಕಿದ ಕೃತಿಗಳ ಸಂಪಾದಕರಾಗಿ, ಸಹ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿರುವುದರ ಜೊತೆಗೆ ವಿವಿಧ ಪತ್ರಿಕೆಗಳಿಗೆ, ಅಭಿನಂದನ ಗ್ರಂಥಗಳಿಗೆ ಮತ್ತು ಸ್ಮರಣ ಸಂಚಿಕೆಗಳಿಗೆ ಮೌಲಿಕ ಲೇಖನಗಳನ್ನು ಒದಗಿಸಿದವರು.
©2025 Book Brahma Private Limited.