ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 190 ಪುಸ್ತಕ ’ಅಮಾಸೆಬೈಲಿನ ಅಶ್ವತ್ಥವೃಕ್ಷ ಗೋಪಾಲಕೃಷ್ಣ ಕೊಡ್ಗಿ’. ಒಬ್ಬ ರಾಜಕಾರಣಿಯಲ್ಲಿರಬೇಕಾದ ನಿಸ್ಪೃಹತೆಗೆ ಗೋಪಾಲಕೃಷ್ಣ ಅವರೊಂದು ಉದಾಹರಣೆ. ಅವರ ಸಮಷ್ಟಿ ದೃಷ್ಟಿಯು ಸಮಗ್ರ ದೃಷ್ಟಿಯೂ ಆಗಿತ್ತು. ವಿಧಾನಸಭೆಯಲ್ಲಿ ತೋರಿಸಿದ್ದ ಆಸಕ್ತಿ ಮತ್ತು ಪಾಲ್ಗೊಳ್ಳುವಿಕೆಯನ್ನೇ ಅವರು ಜಿಲ್ಲಾ ಪರಿಷತ್ತಿನಲ್ಲೂ ಎಪಿಎಂಸಿಯಲ್ಲೂ ತೋರಿಸಿದ್ದರು. ಅಮಾಸೆಬೈಲ್ ಟ್ರಸ್ಟಿನ ಕಾರ್ಯವ್ಯಾಪ್ತಿಯ ಮಾತು ಬಂದಾಗಲೂ ಅದೇ ತನ್ಮಯತೆ, ಒಳಗೊಳ್ಳುವಿಕೆ ಅವರದಾಗಿತ್ತು. ರಾಜಕೀಯಕ್ಕೆ ಇಳಿದು ಬೆಳೆದವರ ಚರಿತ್ರೆಯನ್ನು ಎರಡು ನಿಟ್ಟಿನಿಂದ ನೋಡಲಾಗುತ್ತದೆ. ಒಂದು ತಾತ್ಕಾಲಿಕ ವರ್ಚಸ್ಸಿನದ್ದು. ಇನ್ನೊಂದು ದೀರ್ಘಕಾಲೀನ, ಮಾತ್ರವಲ್ಲ, ಶಾಶ್ವತ ವರ್ಚಸ್ಸಿನದ್ದು. ಒಂದು ರಾಜಕಾರಣಿಗಳು ಬದುಕಿದ ದಿನಗಳಲ್ಲಷ್ಟೇ ಉಪಯುಕ್ತ ಎನ್ನಿಸಿಕೊಳ್ಳುವಂತಹದು. ಇನ್ನೊಂದು ಸಮಾಜಕ್ಕೆ ಶಾಶ್ವತವಾದ ಆಸರೆಯನ್ನು ಕಲ್ಪಿಸಿಕೊಡುವಂತಹದು. ಗೋಪಾಲಕೃಷ್ಣ ಕೊಡ್ಡಿಯವರದ್ದು ಎರಡೂ ನಿಟ್ಟಿನಲ್ಲಿ ಅನನ್ಯವಾದ ಬದುಕು. ಹಲವು ಅರ್ಥಗಳಲ್ಲಿ ಅವರದ್ದು `ಸಮಷ್ಟಿದೃಷ್ಟಿ' ಎನ್ನಿಸಿಕೊಂಡ ಜೀವನ ದೃಷ್ಟಿ. ಕೊಡ್ಗಿ ಅವರ ಜೀವನ-ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ.
©2024 Book Brahma Private Limited.