ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 14ನೇ ಪುಸ್ತಕ. ತುಳು ಸಾಹಿತ್ಯ ಕ್ಷೇತ್ರದಲ್ಲಿ 'ಗಡಿಹಿಡಿದ' ಗುತ್ತಿನಾರ್‌ರ ಹಾಗೆ ಶೋಭಿಸುವ ದರ್ಬೆ ಕೃಷ್ಣಾನಂದ ಚೌಟರು ಕಾಸರಗೋಡಿನವರು. ಮೂಲತಃ ಕೃಷಿ ಕುಟುಂಬದಿಂದ ಬಂದ ಚೌಟರಿಗೆ ಕೃಷಿಯೂ ಸೇರಿದಂತೆ ಇರುವ ಆಸಕ್ತಿಗಳು ಹಲವು. ಅವರ ಕಾರ್ಯಕ್ಷೇತ್ರದ ವ್ಯಾಪ್ತಿಯೂ ಗುತ್ತಿನಮನೆಯ ಬಾಕಿಮಾರು ಗದ್ದೆಯ ಹಾಗೆ ವಿಶಾಲ ಮತ್ತು ಬೆಳೆಯಲ್ಲಿ ಸಮೃದ್ದ. ಬಿಡುವಿಲ್ಲದ ಒತ್ತಡದ ನಡುವೆಯೂ ಅವರು ಜತನದಿಂದ ಕಾದಿರಿಸಿಕೊಂಡು ಬಂದಿರುವ ಸಾಹಿತ್ಯ ಸಂಸ್ಕೃತಿ ಪ್ರೀತಿ, ಚಿತ್ರಕಲೆ ಮತ್ತು ರಂಗಭೂಮಿಯ ವ್ಯಾಮೋಹ ಅವರ ಸೃಜನಶೀಲತೆಗೆ ಕೋಡುಮೂಡಿಸಿತು. ಅದರಿಂದ ತುಳು ಭಾಷೆಗೆ ಲಾಭವಾಯಿತು. ತುಳುಭಾಷೆಯ ಸೊಬಗು ಸೊಗಡನ್ನು ನೋಡಬೇಕಾದರೆ, ಅದರ ಅಂತಃಸತ್ವವನ್ನು ಕೊಡು ಕುಡಿಯಬೇಕಾದರೆ ಚೌಟರ ಬರೆಹಗಳ ಒಳಹೊಗಬೇಕು. ಅದು ಮಹಾಕವಿ ರನ್ನನ ಚಂಪೂ ಕಾವ್ಯದ ಹಾಗೆ ಅದ್ಭುತ ಮತ್ತು ರಮ್ಯ ಲೋಕಕ್ಕೆ ಓದುಗನನ್ನು ಕರೆದೊಯ್ದು ಅಲ್ಲಿ ಅವನನ್ನು ಬಿಡುಗಣ್ಣಿನವನನ್ನಾಗಿ ಮಾಡುತ್ತದೆ. ಚೌಟರನ್ನು ಕುರಿತ ಪುಸ್ತಕವಿದು.
©2024 Book Brahma Private Limited.