ಕಾಂತಾವರ ಕನ್ನಡ ಸಂಘ ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 179ನೇ ಪುಸ್ತಕ ಯಕ್ಷಸಿರಿ ದಕ್ಷ ರೂವಾರಿ ಹೆಚ್. ಶ್ರೀಧರ ಹಂದೆ. ಅನೇಕ ಸಂಘಟನೆಗಳ ಮತ್ತು ಅರ್ಥಪೂರ್ಣ ಕಾರ್ಯಕ್ರಮಗಳ ಯಶಸ್ವೀ ಶಿಲ್ಪಿ. ಅವರೊಬ್ಬ ಅದ್ಭುತ ಸಂಘಟನಕಾರ. ಅವರ ಸಂಘಟನಾ ಸಾಮರ್ಥ್ಯವು ವ್ಯಕ್ತವಾದದ್ದು ಸಾಲಿಗ್ರಾಮ ಮಕ್ಕಳ ಮೇಳದಲ್ಲಿ. 1968ರಲ್ಲಿ ಆರಂಭವಾದ ಕೋಟದ ಮಿತ್ರ ಮಂಡಳಿಯಲ್ಲಿ ಕಲಾಸಕ್ತಿ ಮೂಡಿಸಿತು. ಈ ಸಾಂಸ್ಕೃತಿಕ ಮತ್ತು ಸಾಹಿತ್ಯ ವೇದಿಕೆಯ ಮೂಲಕ ಆರಂಭವಾದ ಶ್ರೀಧರ ಹಂದೆಯವರ ಸಂಘಟನಾ ಚಾತುರ್ಯವು ರಾಜ್ಯ ಮಟ್ಟದ ಜಾನಪದ ಮಹೋತ್ಸವ ನಡೆಸಿದಾಗ ವ್ಯಕ್ತವಾಯಿತು. ಶಿವರಾಮ ಕಾರಂತರಿಗೆ 90 ವರ್ಷ ತುಂಬಿದಾಗ ನಡೆದ ಮೂರು ದಿನಗಳ ಕಾರ್ಯಕ್ರಮ ಆಯೋಜನೆಯಲ್ಲಿ ಸಕ್ರಿಯವಾಗಿದ್ದರು. ಶ್ರೀಧರ ಹಂದೆಯವರ ಬದುಕು-ಸಾಧನೆಯನ್ನು ಈ ಪುಸ್ತಕ ಕಟ್ಟಿಕೊಡುತ್ತದೆ.
©2024 Book Brahma Private Limited.