ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 184ನೇ ಕೃತಿ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಆರ್.ಎಸ್.ರಾಜಾರಾಮ್ ಅವರು ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರವು ದೊರೆತಿದೆ. ಅವರ ಜೀವನ-ಸಾಧನೆಯನ್ನು ಪರಿಚಯಿಸುವ ಕೃತಿ.
ವಿದ್ವಾಂಸ, ಹಿರಿಯ ಪತ್ರಕರ್ತ, ಸಂಘಟಕ, ಲೇಖಕ ಸಿ.ಆರ್. ಕೃಷ್ಣರಾವ್ ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು. ನವಕರ್ನಾಟಕದ ವಿವಿಧ ಬೃಹತ್ ಯೋಜನೆಗಳಿಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿರುತ್ತಾರೆ. 2023 ಸೆಪ್ಟೆಂಬರ್ 10 ನಿಧನ. ಕೃತಿಗಳು: ಸ್ವಾತಂತ್ಯ್ರ ನಂತರದ ಭಾರತ, ನೊಬೆಲ್ ಪುರಸ್ಕೃತರು (ಸಮಗ್ರ ಮಾಹಿತಿ ಕೋಶ), ಕರ್ನಾಟಕ ಕಲಾದರ್ಶನ ಸಂಪುಟ-1, ಬದುಕಿನ ತಿರುವುಗಳು (ಆತ್ಮಕಥೆ), ನವಕರ್ನಾಟಕದ ವಿಜ್ಞಾನ-ತಂತ್ರಜ್ಞಾನ ನಿಘಂಟು -ಇವರ ಸಂಪಾದಿತ ಕೃತಿ. 'ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿ – ನಾನು ಕಂಡಂತೆ'.ಇತ್ಯಾದಿ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ...
READ MORE