ಕನ್ನಡದ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾಗಿರುವ ಗೀತಾ ಕುಲಕರ್ಣಿ ಅವರ ಬದುಕು-ಬರಹ ಪರಿಚಯಿಸುವ ಕೃತಿ. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 104ನೇ ಪುಸ್ತಕ. ದಕ್ಷಿಣ ಕನ್ನಡದಲ್ಲಿ ಅಹಲ್ಯಾ ಧಾರವಾಡದ ಗೀತಾ ಆದ ಎಂಬ ಹೆಸರಿನವರಾದರು. ತಮ್ಮ ಕಾದಂಬರಿಗಳ ಮೂಲಕ ಹೆಸರುವಾಸಿಯಾದರು. ರಂಜನಾ ನಾಯಕ ಅವರು ಈ ಕೃತಿ ರಚಿಸಿದ್ದಾರೆ.
ರಂಜನಾ ನಾಯಕ ಅವರು ಹುಟ್ಟಿದ್ದು 21-01-1949 ಧಾರವಾಡದಲ್ಲಿ. ಎಂ.ಎಸ್ಸಿ ಪದವೀಧರೆಯಾದ ಅವರು ‘ಕೈದಿಗಳು, ಕಾಲಿನಡಿಯಲ್ಲಿ ಮೋಡ, ಪ್ರೀತಿ ಆವಿಯಾಗುವ ಮುನ್ನ’ ಎಂಬ ಕಾವ್ಯ ಸಂಕಲನಗಳು, ‘ತೆರೆ ಸರಿದಾಗ’ – ನಾಟಕ, ‘ಭಾಗೀರಥಿ ಬಾಯಿ ಪುರಾಣಿಕ’ ಹಾಗೂ ‘ಗೀತಾ ಕುಲಕರ್ಣಿ’ ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಪ್ರಸಿದ್ಧ ಸ್ತ್ರೀವಾದಿ ಲೇಖಕಿ, ಧಾರವಾಡದ ಹಿರಿಯಕ್ಕ ಗೀತಾ ಕುಲಕರ್ಣಿ ಅವರ ಬದುಕು ಬರಹಗಳ ಕುರಿತಾದ ಕೃತಿಯನ್ನು ರಚಿಸಿರುವ ಶ್ರೀಮತಿ ರಂಜನಾ ನಾಯಕ ಅವರು ಗೀತಾ ಕುಲಕರ್ಣಿಯವರ ಮಗಳು ಹಾಗೂ ಸಂಘಟನೆಯಲ್ಲೂ, ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವ ಪ್ರತಿಭಾವಂತ ಲೇಖಕಿ. ಧಾರವಾಡದಲ್ಲಿ ಹುಟ್ಟಿ ಬೆಳೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ...
READ MORE