ಕಾಂತಾವರದ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಅಡಿಯಲ್ಲಿ ಪ್ರಕಟಿಸಿದ 189ನೇ ಪುಸ್ತಕ ಎ.ಬಿ. ಶೆಟ್ಟಿ. ಬ್ಯಾಂಕ್ ವ್ಯವಹಾರದ ಮೂಲಕ ಸಮಾಜವನ್ನು ಆರ್ಥಿಕ ಮುಗ್ಗಟ್ಟಿನಿಂದ ಎತ್ತುವ ಉದ್ದೇಶದಿಂದ ಶೆಟ್ಟರು 2ನೇ ಫೆಬ್ರವರಿ 1931ರಂದು ವಿಜಯ ಬ್ಯಾಂಕ್ ಎಂಬ ನಾಮಕರಣದೊಂದಿಗೆ ಬ್ಯಾಂಕ್ ಸ್ಥಾಪಿಸಿದರು. ತಾನೇ ಸ್ಥಾಪಕ ಅಧ್ಯಕ್ಷನಾಗಿ ಜಿಲ್ಲೆಯ ಮೊದಲ ಶಾಖೆಯ ಉದ್ಘಾಟನೆಯನ್ನು ಜಿಲ್ಲಾ ಕಲೆಕ್ಟರ್ ಆಗಿದ್ದ ಜವಾದಾ ಹುಸೇನ್ ಇವರ ಕೈಯಿಂದ ನೆರವೇರಿಸಿದರು. 1931-37ರವರೆಗೆ ತಾನೇ ಅಧ್ಯಕ್ಷ ಸ್ಥಾನದಲ್ಲಿದ್ದು ಬ್ಯಾಂಕ್‌ನ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಂಡು ಬಂದರು. ಶೆಟ್ಟರು ಅಂದುಕೊಂಡಂತೆ ವಿಜಯ ಬ್ಯಾಂಕ್‌ನ ಸ್ಥಾಪನೆ ದಕ್ಷಿಣ ಕನ್ನಡ ಕೃಷಿಕ ಸಮಾಜದಲ್ಲಿ ನೂತನ ಅಧ್ಯಾಯನವನ್ನೇ ಪ್ರಾರಂಭಿಸಿದರು. ಬಂಟರ ಸಮಾಜದಲ್ಲಿ ವ್ಯಾಪಾರ ವಹಿವಾಟುಗಳ ಕುರಿತು ಜಾಣೆ ಕೌಶಲ್ಯ, ಸಿದ್ಧಿಸಿತ್ತು. ಹೀಗೆ ವಿಧಾಯಕ ಕೆಲಸ ಮಾಡಿದ ಎ.ಬಿ. ಶೆಟ್ಟಿ ಅವರ ಜೀವನ-ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ.
©2025 Book Brahma Private Limited.