ಬಹುಭಾಷಾ ವಿದ್ವಾಂಸರಾಗಿದ್ದ ಪುಂಡೂರು ವೆಂಕಟರಾಜ ಪುಣಿಂಚತ್ತಾಯ ಅವರು ಹೆಸರಾಂತ ಜಾನಪದ ವಿದ್ವಾಂಸರೂ ಹೌದು. ಪತ್ರಿಕಾವೃತ್ತಿಯಲ್ಲಿ ಕೆಲಸ ಮಾಡಿದ ಅವರು ಮೈಸೂರಿನ ಯುವಜನ ಮಾಸಪತ್ರಿಕೆ ’ವಿವೇಕ’ದಲ್ಲಿ ಸಂಪಾದಕರಾಗಿದ್ದರು. ಆ ಬಳಿಕ ಕೊಡಗಿನ ಪಾರಾಣೆ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ನಂತರ ಕಾಸರಗೋಡಿಗೆ ಮರಳಿ ಅಧ್ಯಾಪಕರಾಗಿ ನಿವೃತ್ತರಾಗುವವರೆಗೆ ಅಲ್ಲಿಯೇ ಉಳಿದರು. ಸಾಹಿತ್ಯ, ಯಕ್ಷಗಾನ, ನಾಟಕ, ಭಾಷಣಗಳಲ್ಲಿ ಆಸಕ್ತರಾಗಿದ್ದ ಅವರು ವಿದ್ಯಾರ್ಥಿಗಳ ಪ್ರೀತಿಯ ಮೇಷ್ಟ್ರಾಗಿದ್ದರು. ಸಂಶೋಧನಾ ಕ್ಷೇತ್ರದಲ್ಲಿ ಅವರದು ಗಣನೀಯ ಸಾಧನೆ. ಅವರ ಬದುಕು ಬರೆಹದ ಕುರಿತ ವಿವರಗಳನ್ನು ಈ ಕೃತಿಯು ನೀಡುತ್ತದೆ. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 174ನೇ ಪುಸ್ತಕ.
©2024 Book Brahma Private Limited.