ಕವಿ, ವಿಮರ್ಶಕ, ಕತೆಗಾರ ಕೆ.ವಿ. ತಿರುಮಲೇಶ್ ಅವರ ಬದುಕು-ಬರಹ, ಸಾಧನೆಗಳನ್ನು ಕಟ್ಟಿಕೊಡುವ ಕಿರುಪರಿಚಯಾತ್ಮಕ ಕೃತಿ. ತಿರುಮಲೇಶ್ ಅವರ ಬರವಣಿಗೆಯ ಕುರಿತು ಮಾಹಿತಿ ನೀಡುವ ಈ ಕೃತಿಯನ್ನು ಕಾಂತಾವರ ಕನ್ನಡ ಸಂಘವು ಪ್ರಕಟಿಸಿದೆ. ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾದ 108ನೇ ಕೃತಿಯಿದು.
ಕವಯತ್ರಿ ಮಹೇಶ್ವರಿ ಅವರು ಕನ್ನಡ ಮತ್ತು ಇಂಗ್ಲೀಷ್ ಎರಡರಲ್ಲೂ ಸ್ನಾತಕೋತ್ತರ ಪದವಿ ಪಡೆದವರು. 1928 ಮಾರ್ಚ್ 18 ರಂದು ಕಾಸರಗೋಡಿನ ಬೆಳಾಗಾಮದ ಉಜೋಡಿಯಲ್ಲಿ ಜನಿಸಿದರು. ಕನ್ನಡದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ವಿಭಾಗ ಮುಖ್ಯಸ್ಥೆಯಾಗಿ 2014ರಲ್ಲಿ ನಿವೃತ್ತರಾಗಿದ್ದಾರೆ. ಇವರ ‘ಇದು ಮಾನುಷಿಯ ಓದು’ ಕೃತಿಗೆ ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ ದೊರಕಿದೆ. ಅಲ್ಲದೆ ‘ಮುಗಿಲ ಹಕ್ಕಿ’ ಕವನಸಂಕಲನಕ್ಕೆ ವಾರಂಬಳ್ಳಿ ಪ್ರತಿಷ್ಠಾನ ಪ್ರಶಸ್ತಿ ಹಾಗೂ ‘ಧರೆಯು ಗರುವದಿ ಮೆರೆಯಲಿ’ ಕವನಸಂಕಲನಕ್ಕೆ ಸುಶೀಲಾಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ ದೊರಕಿದೆ. ’ಮುಗಿಲ ಹಕ್ಕಿ, ಇದು ಮಾನುಷಿಯ ...
READ MORE