ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 15ನೆಯ ಪುಸ್ತಕ. ಗಾಂಧೀಜಿಯವರ ಅನುಯಾಯಿಯಾಗಿದ್ದ ಅವರು ಉ.ಕಾ. ಸುಬ್ಬರಾಯಾಚಾರ್ಯ ಅವರು ಗಾಂಧೀಜಿಯ 'ಜಗತ್ತಿನಲ್ಲಿ ಪ್ರೀತಿಯಿಂದ ಪರಿವರ್ತನೆಯಾಗದ್ದು ಯಾವುದೂ ಇಲ್ಲ' ಎಂಬುದನ್ನು ಖಚಿತವಾಗಿ ನಂಬಿದ್ದರು. ಹಾಗೆ ನಡೆದುಕೊಂಡವರು ಕೂಡ. ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿದ್ಯಾರ್ಥಿ ಕ್ಷೇಮಪಾಲಕರಾಗಿ, ಅವರು ತರಗತಿಯ ಹೊರಗೆ ಬೀರಿದ ಪ್ರಭಾವ ಅಸಾಧಾರಣ. ಸಾಹಿತ್ಯ ಮತ್ತು ಸಂಗೀತವನ್ನು ಜೀವನ ಪ್ರೀತಿಯ ಭಾಗವಾಗಿ ಸ್ವೀಕರಿಸಿದ್ದ ಅವರು 25ಕ್ಕೂ ಕೃತಿ ರಚಿಸಿದ್ದಾರೆ. ಇಂದಿನ ತಲೆಮಾರು ಬೆರಗುಪಡುವ ಹಾಗೆ ಬಾಳಿದ ಬದುಕು ಅವರನ್ನು ನೈತಿಕ ಶಿಕ್ಷಣದ ಚಿಂತಕ ಉ. ಕ. ಸುಬ್ಬರಾಯಾಚಾರ್ಯರು. ಅವರ ಜೀವನ ಮತ್ತು ಸಾಧನೆಯನ್ನು ಈ ಕೃತಿ ಕಟ್ಟಿಕೊಡುತ್ತದೆ.
©2025 Book Brahma Private Limited.