ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ - ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಹನ್ನೊಂದನೆಯ ಪುಸ್ತಕ ’ಸಮಾಜ ಸೇವೆ ಇನ್ನೊಂದು ಹೆಸರು ಧರ್ಮದರ್ಶಿ ಹರಿಕೃಷ್ಣ ಪುನರೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಯಕ್ಷರಾಗಿದ್ದ ಹರಿಕೃಷ್ಣ ಪುನರೂರು ಅವರು ಹೊರನೋಟದಲ್ಲಿ ಅಥವಾ ಸಂಪರ್ಕದಲ್ಲಿ ತುಸು ಒರಟೆನ್ನುವ ಹಾಗೆ ನಡೆದ ಮುಖವಾಡ ಧರಿಸದ ವ್ಯಕ್ತಿ. ಅಂತರಂಗದಲ್ಲಿ ಇನ್ನೊಬ್ಬರ ಕಷ್ಟಕ್ಕೆ ಕರಗುವ ಜೀವದ್ರವ್ಯದ ಮತ್ತು ಕೈಲಾದವರಿಗೆ ಕೈಮೀರಿ ನೆರವಾಗುವ ಔದಾರ್ಯದ ಮೂರ್ತಿ. ಪುನರೂರನ್ನು ಒಪ್ಪಿಕೊಂಡವರಿಗೂ, ಒಪ್ಪಿಕೊಳ್ಳದವರಿಗೂ ಅವರು ಸದಾ ಆಕರ್ಷಣೆಯ ಕೇಂದ್ರ. ನಡೆನುಡಿಗಳು ವೈಭವೀಕರಣಕ್ಕೆ ಒಳಗಾದ ಹಾಗೆ ಅವು ಅನೇಕರ ಟೀಕೆಗೂ ಅಸೂಯೆಗೂ ಕಾರಣವಾಗಿವೆ. ಆದರೆ ಅವರು ತೊಡಗಿಸಿಕೊಂಡ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಸಾಹಿತ್ಯಸೇವೆಯ ಚಟುವಟಿಕೆಗಳಲ್ಲಿನ ನಿಸ್ಪೃಹತೆ ಮತ್ತು ಅವರ ಒಟ್ಟು ಕೊಡುಗೆಗಳ ಮೊತ್ತದ ಬಗ್ಗೆ ಭಿನ್ನಾಭಿಪ್ರಾಯ ಇರಲಾರದು ಎನ್ನುವ ವ್ಯಕ್ತಿತ್ವ ಅವರದ್ದು. ಸಮಾಜ ಸೇವೆಗೆ ಇನ್ನೊಂದು ಹೆಸರು ಧರ್ಮದರ್ಶಿ ಹರಿಕೃಷ್ಣ ಪುನರೂರು ಕೃತಿಯು ಅವರ ಜೀವನ-ಸಾಧನೆಯನ್ನು ಕಟ್ಟಿಕೊಡುತ್ತದೆ.
©2024 Book Brahma Private Limited.