ವಿಜಯ ಬ್ಯಾಂಕ್‌ನ ರುವಾರಿಯಾಗಿದ್ದ ಮುಲ್ಕಿ ಸುಂದರರಾಮ ಶೆಟ್ಟಿ ಅವರ ಜೀವನ-ಸಾಧನೆಯ ಕಿರುಪರಿಚಯ ನೀಡುವ ಕೃತಿಯಿದು. ಕಾಂತಾವರ ಕನ್ನಡ ಸಂಘವು ಈ ಕೃತಿಯನ್ನು ಪ್ರಕಟಸಿದೆ. ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾದ 109ನೇ ಕೃತಿಯಿದು.
ತುಳು-ಕನ್ನಡ ಉಭಯಭಾಷಾ ಕವಿ-ಸಾಹಿತಿ ಎನ್.ಪಿ. ಶೆಟ್ಟಿ ಮುಲ್ಕಿ ಅವರು ದಕ್ಷಿಣ ಕನ್ನಡದ ಮಂಗಳೂರಿನ ಮುಲ್ಕಿಯಲ್ಲಿ ಜನಿಸಿದರು. ತಂದೆ ಕುಬೆವೂರು ಪುಟ್ಟಣ್ಣ ಶೆಟ್ಟಿ. ಯಕ್ಷಗಾನ, ಯೋಗ ಕ್ಷೇತ್ರದಲ್ಲಿಯೂ ಅಪಾರ ಜನಮನ್ನಣೆಯನ್ನು ಪಡೆದಿದ್ದ ಅವರು, ಕನ್ನಡ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದು ಮುಂಬಯಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ನಂತರ ವಿಜಯಾ ಬ್ಯಾಂಕಿನ ಅಧಿಕಾರಿಯಾಗಿ ಸ್ವಯಂ ನಿವೃತ್ತಿ ಪಡೆದರು. ಅವರ ‘ಬತ್ತೆ ಕೆತ್ತರೆ ಉತ್ತರೆ, ತಪ್ಪುಗು ತರೆದಂಡ’ ಕೃತಿಗಳಿಗೆ ತುಳು ಸಾಹಿತ್ಯ ಅಕಾಡೆಮಿಯ ಕಾವ್ಯ ಪ್ರಶಸ್ತಿ ದೊರೆತಿವೆ. ತುಳು – ಕನ್ನಡ ಉಭಯಭಾಷಾ ಕವಿ, ಸಾಹಿತಿ ಎನ್.ಪಿ. ಶೆಟ್ಟಿ ಮುಲ್ಕಿ ಇವರು ಮುಲ್ಕಿಯವರೇ ಆದ ದೇಶಭಕ್ತ ಸಮಾಜಸುಧಾರಕ ...
READ MORE