ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾಗಿರುವ 95ನೇ ಪುಸ್ತಕವಿದು. ಜೇನು ಕೃಷಿ ತಜ್ಞರಾಗಿರುವ ಪೈಲೂರು ಲಕ್ಷ್ಮೀನಾರಾಯಣ ರಾವ್ ಅವರ ಜೀವನ ಸಾಧನೆಯನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಪೈಲೂರು ಲಕ್ಷ್ಮೀನಾರಾಯಣ ರಾವ್ ಅವರು ಕೇವಲ ಜೇನು ಕೃಷಿಕರು ಮಾತ್ರವಲ್ಲ ಹಲವು ಹವ್ಯಾಸಗಳ ಮೂಲಕವೂ ಜನಪ್ರಿಯರು.
ಹಿರಿಯ ಕವಿ, ಕಥೆಗಾರ, ಚಿಂತಕ ಜಿ.ಎಸ್. ಉಬರಡ್ಕ ಅವರ ಪೂರ್ಣ ಹೆಸರು ಗಣಪತಿ ಸುಬ್ರಹ್ಮಣ್ಯ ಉಬರಡ್ಕ. ಸುಳ್ಯ ತಾಲೂಕಿನ ಉಬರಡ್ಕದವರಾದ ಅವರು ಕಳೆದ ಏಳು ದಶಕಗಳಿಂದ ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ನಿವಾಸಿ. ಸಂಸ್ಕೃತ ಕಾವ್ಯ ಮತ್ತು ಕನ್ನಡ ಎಂ.ಎ. ಪದವಿ ಪಡೆದಿವರು ಅವರು ತೋಟಗಾರಿಕೆ ಹಾಗೂ ಸಾಹಿತ್ಯ ಕೃಷಿ ನಿರತರು. ಸಾಹಿತ್ಯದಲ್ಲಿ ಕಾವ್ಯ ಅವರ ಮೊದಲ ಆಯ್ಕೆ. ಕಥೆ, ಪ್ರಬಂಧ, ಜಾನಪದ ಕ್ಷೇತ್ರದಲ್ಲಿಯೂ ಕೃತಿ ರಚನೆ ಮಾಡಿದ್ದಾರೆ. ಕ್ಯೂ ನಿಂತ ಪಾಶಗಳು, ಅರಣ್ಯ ಕಾಂಡ, ಹನಿ ಹನಿ ಸೂರ್ಯ, ಹೂ ಬಿಟ್ಟ ಮರದಲ್ಲಿ ಅವರ ಕವನ ...
READ MORE