ಹಿರಿಯ ಪತ್ರಕರ್ತ ಕೆ. ಶಿವಸುಬ್ರಹ್ಮಣ್ಯ ಅವರು ಅತ್ಯುತ್ತಮ ಛಾಯಾಗ್ರಾಹಕರೂ ಹೌದು. ಕನ್ನಡ ಪ್ರಭ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದ ಅವರು ಉದಯವಾಣಿ ಪತ್ರಿಕೆಯಲ್ಲಿ ಸಂಪಾದಕರಾಗಿದ್ದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಆಸಕ್ತಿಯುಳ್ಳ ಶಿವಸುಬ್ರಹ್ಮಣ್ಯ ಅವರು ಛಾಯಾಗ್ರಹಣದಲ್ಲಿ ತಮ್ಮದೇ ನೆಲೆ ಕಂಡುಕೊಂಡವರು. ಛಾಯಾಗ್ರಾಹಕರಾಗಿ ಅವರು ಅನುಪಮ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಅವರ ಜೀವನ-ಸಾಧನೆಯನ್ನು ಕುರಿತ ಕಿರು ಪುಸ್ತಕ. ಕಾಂತಾವರ ಕನ್ನಡ ಸಂಘ ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯ 134ನೇ ಪುಸ್ತಕವಿದು.
ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಜನಿಸಿದ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರು (1938) ಕಳೆದ 35 ವರ್ಷಗಳಿಂದ ವೈದ್ಯಕೀಯ ವೃತ್ತಿಯನ್ನು ಕೈಗೊಂಡು ಮಂಡ್ಯದಲ್ಲಿ ನೆಲೆಸಿದ್ದಾರೆ. ಪೂರ್ಣಕಾಲಿಕ ಸಾಹಿತಿಯೆನ್ನುವಷ್ಟು ಸಮೃದ್ದ ಸಾಹಿತ್ಯವನ್ನು ಸೃಷ್ಟಿಸಿರುವ ಡಾ. ಪ್ರದೀಪ್ ಕುಮಾರ್ ಹೆಬ್ರಿಯವರು 220 ಸಾಹಿತ್ಯಕೃತಿಗಳನ್ನು ಪ್ರಕಟಿಸಿದ್ದಾರೆ. ಏಳು ಮಹಾಕಾವ್ಯಗಳನ್ನು ರಚಿಸಿರುವ ಅತ್ಯಂತ ಅಪರೂಪದ ಸಾಹಿತಿ ಡಾ. ಹೆಬ್ರಿ. ಯುಗಾವತಾರಿ (ಭಕ್ತಿಭಂಡಾರಿ ಬಸವಣ್ಣನವರನ್ನು ಕುರಿತ 4500 ಪುಟಗಳ ಆರು ಸಂಪುಟಗಳ ಕಾವ್ಯ): ಪೂರ್ಣಪ್ರಜ್ಞ (ಆಚಾರ್ಯ ಮಧ್ಯರ ಕುರಿತು); ಕಲ್ಪತರು (ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಕುರಿತು); ಉಡುತಡಿಯ ಕಿಡಿ (ಅಕ್ಕಮಹಾದೇವಿಯನ್ನು ಕುರಿತು): ಪ್ರಜ್ಯೋತಿ (ಬದುಕು ಸಂಸ್ಕೃತಿಯನ್ನು ಕುರಿತು): ಶರಣ ...
READ MORE