ಕಾಂತಾವರದ ಕನ್ನಡ ಸಂಘವು ಪ್ರಕಟಿಸುತ್ತಿರುವ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 230 ನೇ ಕೃತಿ ಹುರುಳಿ ಭೀಮರಾವ್. ಆದ್ಯ ಪತ್ರಕರ್ತ ವಿಶಿಷ್ಟ ಸಾಹಿತಿ ಹುರುಳಿ ಭೀಮರಾವ್ ದಕ್ಷಿಣಕನ್ನಡ ಜಿಲ್ಲೆಯ ಆದ್ಯ ಪತ್ರಕರ್ತರೂ, ಹಾಸ್ಯ ಸಾಹಿತಿಗಳೂ, ಕಾದಂಬರಿಕಾರರೂ ಆದ ಹುರುಳಿ ಭೀಮರಾಯರು ದಕ್ಷಿಣ ಕನ್ನಡದ ನವೋದಯದ ಒಬ್ಬ ಮುಖ್ಯ ಸಾಹಿತಿಗಳು. ನವೋದಯ ಕಾಲದ ಪ್ರಸಿದ್ದ ಪತ್ರಿಕೆ 'ಕಂಠೀರವ'ದ ಸಂಪಾದಕ ರಾಗಿ, 'ಮುರುಕು ದಂಬೂಕು' (೧೯೪೭) ಮತ್ತು 'ಹಾಸನ್‌ಟೋಪಿ' (೧೯೫೨) ಎಂಬ ಪ್ರಸಿದ್ಧ ಕಾದಂಬರಿಗಳ ಲೇಖಕರಾಗಿ ಅವರ ಹೆಸರು ಉಳಿಯುತ್ತದೆ. ಭೀಮರಾವ್ ಬದುಕು-ಬರೆಹಗಳನ್ನು ಕುರಿತ ಪರಿಚಯಾತ್ಮಕ ಕೃತಿ.
©2025 Book Brahma Private Limited.