ಡಾ. ಹರಿಕೃಷ್ಣ ಭರಣ್ಯ

Author : ರವಿಶಂಕರ ಜಿ. ಕೆ.

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 202 ನೇ ಪುಸ್ತಕ. ಭರಣ್ಯ ಹವಿಗನ್ನಡದ ಅನನ್ಯ ಸಾಹಿತಿ, ವಿದ್ವಾಂಸ ಡಾ. ಹರಿಕೃಷ್ಣ ಭರಣ ಡಾ.ಹರಿಕೃಷ್ಣ ಭರಣ್ಯರು ತಮಿಳ್ಳಾಡಿನ ಮದುರೈಯ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದು ನಿವೃತ್ತ ರಾಗಿರುವ ಖ್ಯಾತ ಕನ್ನಡ ಲೇಖಕ ಹಾಗೂ ಅಧ್ಯಯನಶೀಲ ವಿದ್ವಾಂಸರು, ಹವಿಗನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಭರಣ್ಯರದು ಬಹಳ ಮುಖ್ಯವಾದ ಹೆಸರು. ಭರಣ್ಯರು ಕನ್ನಡದಲ್ಲಿ 'ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ' ಸಂಶೋಧನಕೃತಿ, 'ಮೂಡುಮಜಲು' ಕಾದಂಬರಿ ಮುಂತಾಗಿ ಹಲವಾರು ಸಾಹಿತ್ಯಕೃತಿಗಳನ್ನು ಪ್ರಕಟಿಸಿದ್ದಾರೆ.  ಹರಿಕೃಷ್ಣ ಭರಣ್ಯರ ಬದುಕು ಬರಹಗಳನ್ನು ಸಮೀಕ್ಷಿಸುವ ಕೃತಿಯಿದು.

About the Author

ರವಿಶಂಕರ ಜಿ. ಕೆ.

ರವಿಶಂಕರ ಜಿ.ಕೆ.(ಜನನ 1991) ವಿವೇಕಾನಂದ ಕಾಲೇಜಿನಲ್ಲಿ ವರ್ಮುಡಿಯವರ ಶಿಷ್ಯರಾಗಿದ್ದವರು. ಪ್ರಸ್ತುತ ಕಾಸರಗೋಡಿನ ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಯುಜಿಸಿಯ ಜೆ.ಆರ್.ಎಫ್. ಶಿಷ್ಯವೇತನದೊಂದಿಗೆ ಕ್ರಿ.ಶ. 850 ರಿಂದ ಕ್ರಿ.ಶ. 1400ರವರೆಗಿನ ಕನ್ನಡ ಸಾಹಿತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು 'ಕನ್ನಡ ಸಾಹಿತ್ಯದಲ್ಲಿ ಪ್ರಾಣಿ ರೂಪಕಗಳು: ಅನ್ಯತೆಯ ಅನುಸಂಧಾನ' ಎಂಬ ವಿಷಯದ ಕುರಿತಾಗಿ ಪಿಹೆಚ್.ಡಿ. ಅಧ್ಯಯನ ನಡೆಸುತ್ತಿದ್ದಾರೆ. ಮೊದಲ ಯತ್ನದಲ್ಲಿ ಯುಜಿಸಿ ನಡೆಸುವ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಮತ್ತು ಕರ್ನಾಟಕ ಸರಕಾರ ನಡೆಸುವ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಮೊದಲ ಯತ್ನಕ್ಕೆ ತೇರ್ಗಡೆಯಾಗಿದ್ದಾರೆ. ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ.ನಲ್ಲಿ ...

READ MORE

Related Books