ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಎರಡನೆಯ ಪುಸ್ತಕ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ. ಅಪೂರ್ವ ಒಳನೋಟ ಆಕರ್ಷಕ ಅಸ್ಖಲಿತ ವಾಗ್ಮೀಯತೆಗಳಲ್ಲಿ ಪುರಾಣ ಮತ್ತು ಮಹಾಕಾವ್ಯಗಳನ್ನು ಆಧುನಿಕತೆಯ ಬೆಳಕಿನಲ್ಲಿ ವಿವರಿಸಬಲ್ಲರು. ಛಾಯಾಗ್ರಾಹಕ, ಮಾತಿನ ಮಾಂತ್ರಿಕ, ಅಪರೂಪದ ಅನುವಾದಕ, ಕವಿಸಮಯದಲ್ಲಿ ಅನುಭವಿಸಿದ್ದನ್ನು ಇನ್ನೂ ಹೇಳದೇ ಉಳಿದ ಕವಿ. ಬನ್ನಂಜೆ ಅವರ ಜೀವನ ಸಾಧನೆಯನ್ನು ಪರಿಚಯಿಸುವ ಕೃತಿ.
ಬೆಳಗೋಡು ರಮೇಶ ಭಟ್ಟರು ವೃತ್ತಿಯಲ್ಲಿ ಸಿಂಡಿಕೇಟ್ ಬ್ಯಾಂಕಿನ ಹಿರಿಯ ಪ್ರಬಂಧಕರು, ಪ್ರವೃತ್ತಿಯಲ್ಲಿ ಒಬ್ಬ ಅಪರೂಪದ ಕತೆಗಾರ ಮತ್ತು ಕವಿ. 'ಜರಾಸಂಧ' (ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪುರಸ್ಕೃತ - 1987), 'ಅಂಬಿಗನ ಹಂಗಿಲ್ಲ' (ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ - 2005) ಅವರು ಪ್ರಕಟಿಸಿರುವ ಕವನ ಸಂಗ್ರಹಗಳು. 'ಮನುಷ್ಯರನ್ನು ನಂಬಬಹುದು' (ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿ ಪುರಸ್ಕೃತ) ಎನ್ನುವ ಅವರ ಕಥಾಸಂಗ್ರಹ ಪ್ರಕಟವಾದ ಮೂರೇ ತಿಂಗಳಲ್ಲಿ ಮಾರಾಟವಾಗಿ ಆಶ್ಚರ್ಯ ಹುಟ್ಟಿಸಿದ ಕೃತಿ (2005). 'ಶ್ರೀಕೃಷ್ಣಾರ್ಪಣ' (ಬೈಕಾಡಿ ಕೃಷ್ಣಯ್ಯನವರ ಸಂಸ್ಮರಣೆ - 2006) ಮತ್ತು 'ನಾದ ಸುನಾದ' (ನಾದವೈಭವಂ ...
READ MORE