ಕಾಂತಾವರ ಕನ್ನಡ ಸಂಘ ಪ್ರಕಟಿಸುತ್ತಿರು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ’ಯ 238ನೇ ಕೃತಿ ಉಪಾಧ್ಯಾಯ ಮೂಡುಬೆಳ್ಳೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾವಿದ ಉಪಾಧ್ಯಾಯ ಮೂಡುಬೆಳ್ಳೆ ಅವರು ಕಲಾವಿಮರ್ಶೆ ಮತ್ತು ಕಲಾಶಿಕ್ಷಣದಲ್ಲಿ ವಿಶಿಷ್ಟ ಹೆಸರು. ಕಲಾವಿದ ಉಪಾಧ್ಯಾಯ ಮೂಡುಬೆಳ್ಳೆ ಅವರು ’ಉಪಾಧ್ಯಾಯ ಮೂಡುಬೆಳ್ಳಿ' ಎಂದೇ ಪ್ರಸಿದ್ದರು. ರಾಧಾಕೃಷ್ಣ ಉಪಾಧ್ಯಾಯರು ತೈಲವರ್ಣ, ಜಲವರ್ಣ, ಕಾರ್ಟೂನ್, ಏಕರೇಖಾಚಿತ್ರ, ಎನಾಮೆಲ್ ಪೈಂಟ್, ಆಕ್ರಿಲಿಕ್, ಆಯಿಲ್ ಪೇಸ್ಟಲ್, ಟೆಂಪರಾ, ರಂಗೋಲಿ, ಮಂಡಲ, ತಟ್ಟಿ ಚಿತ್ರ, ಭಿತ್ತಿ ಚಿತ್ರ, ಫೋಟೋಗ್ರಫಿ ಇತ್ಯಾದಿ ಬಹುವಿಧ ಕಲೆಗಳಲ್ಲಿ ಪರಿಣತರು. ಕಲಾವಿಮರ್ಶಕರಾಗಿಯೂ ಅವರ ಕೊಡುಗೆಯಿದೆ. ಅವರ ಜೀವನ-ಸಾಧನೆಯನ್ನು ಈ ಕೃತಿ ಕಟ್ಟಿಕೊಡುತ್ತದೆ.
©2025 Book Brahma Private Limited.