ಬಹುಮುಖ ಪ್ರತಿಭೆಯ ತುದಿಯಡ್ಕ ವಿಷ್ಣ್ವಯ್ಯ ಅವರನ್ನು ಕುರಿತ ಈ ಕೃತಿಯು ಕಾಂತಾವರ ಕನ್ನಡ ಸಂಘ ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯ 103ನೇ ಪುಸ್ತಕ. ವಿಷ್ಣ್ವಯ್ಯ ಅವರ ಪ್ರಕಟಿತ ಕೃತಿಗಳ ಸಂಖ್ಯೆ ಕಡಿಮೆ ಇದ್ದರೂ ಅವುಗಳೆಲ್ಲ ಅರ್ಥಪೂರ್ಣವಾಗಿವೆ. ಅಬ್ಬರತಾಳ (ಯಕ್ಷಗಾನ ವಿಚಾರ ವಿಮರ್ಶೆ), ದೇವರು ಇಲ್ಲ ? (ಪ್ರೊ. ಎ. ಎನ್. ಮೂರ್ತಿರಾಯರ `ದೇವರು' ಕೃತಿಗೆ ಪ್ರತಿಕ್ರಿಯೆ), ಜನಸ್ಪಂದನ (ಪತ್ರಿಕೆಗಳಲ್ಲಿಯ ಪ್ರತಿಕ್ರಿಯೆಗಳು), ದೊರೆಯ ಪರಾಜಯ ಮತ್ತು ಇತರ ಕೃತಿಗಳು (ಕಥಾಸಂಕಲನ) ಅವರ ಪ್ರಕಟಿತ ಕೃತಿಗಳು. ವಿಷ್ಣ್ವಯ್ಯ ಅವರ ಸಾಧನೆಯನ್ನು ಕೃತಿಯು ಕಟ್ಟಿಕೊಡುತ್ತದೆ.
ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ಸರೋಜಿನಿ ನಾಗಪ್ಪಯ್ಯ ಅವರು ಮೂಲತಃ ಕಾಂತಾವರದವರು. ಪ್ರಸ್ತುತ ನಿವೃತ್ತ ಶಿಕ್ಷಕಿ. ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನೆಲೆಸಿದ್ದಾರೆ. ಅವರ ಹಲವಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ. ಸಾಕ್ಷರತಾ ಆಂದೋಲನ, ಪರಿಸರ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಂಸ್ಕೃತಿಕ ಸೇವೆಗೆ ನಿಂತವರು. ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗಳು, ದೆಹಲಿಯ ಬಾಬು ಜಗಜೀವನರಾಂ ಫೌಂಡೇಶನ್ ನೀಡುವ ಸಾವಿತ್ರಿ ಬಾಯಿ ಫುಲೆ ನ್ಯಾಷನಲ್ ಫೆಲೋಶಿಪ್ ಅವಾರ್ಡ್ ಇತ್ಯಾದಿ ಪ್ರಶಸ್ತ್ತಿಗಳು ಸಂದಿವೆ. ‘ಪ್ರಸ್ತುತ’ ಅವರ ಪ್ರಮುಖ ಕೃತಿ. ...
READ MORE